Header Ads
Breaking News

ವೋಟರ್ ಲಿಸ್ಟ್‌ನಲ್ಲಿ ಕೆಲವರ ಹೆಸರು ಉದ್ದೇಶಪೂರ್ವಕವಾಗಿ ಕೆಲವರ ಹೆಸರನ್ನು ತೆಗೆಯಲಾಗಿದೆ ಶಾಸಕ ಜೆ.ಆರ್.ಲೋಬೋ ಆರೋಪ

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಉದ್ದೇಶಪೂರ್ವಕವಾಗಿ ಕೆಲ ಮತದಾರರ ಹೆಸರನ್ನು ತೆಗೆಯಲಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಆರೋಪಿಸಿದ್ದಾರೆ. ಮಂಗಳೂರಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಹಲವಾರು ಚ್ಯುತಿಗಳಾಗಿವೆ. ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿಯಾಗಿ ತೆಗೆದು ಹಾಕಲಾಗಿದೆ. ಇದು ಖಂಡನೀಯ ಎಂದರು. ಮಂಗಳೂರು ದಕ್ಷಿಣ ಕ್ಷೇತ್ರದ ಮತಗಟ್ಟೆ ನಂಬರ್ ಒಂದು, ಕುದ್ರೋಳಿ, ನಾಲ್ಯಪದವು ಹಾಗೂ ಬಿಕರ್ನಕಟ್ಟೆ ಸೇರಿ ವಿವಿಧೆಡೆ ಮೊನ್ನೆ ಮೊನ್ನೆ ತನಕ ಲಿಸ್ಟ್ ನಲ್ಲಿದ್ದ ಹೆಸ್ರು ಇಂದು ಕಣ್ಮರೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದವರ ಹೆಸರು ಈ ಸಲದ ಚುನಾವಣೆಯಲ್ಲಿ ಮತದಾನ ಮಾಡಲು ವಂಚಿತರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಕೆಲವರ ಹೆಸರನ್ನು ತೆಗೆಯಲಾಗಿದೆ. ಇದ್ರ ಹಿಂದೆ ರಾಜಕೀಯ ಕೈವಾಡ ಇದೆ. ಪ್ರತಿ ಬೂತ್ ನಲ್ಲಿ ೨೫ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಆರೋಪಿಸಿದರು. ಮತದಾನ ಪಟ್ಟಿಯಲ್ಲಿ ಲೋಪ ಇದ್ದರೆ ಎಲ್ಲವೂ ತಪ್ಪುತ್ತದೆ. ಆಧಾರ್ ಲಿಂಕನ್ನ ವೋಟರ್ ಐಡಿಗೆ ಯಾಕೆ ಮಾಡಬಾರದು..? ಈ ಕುರಿತು ಸಂಪೂರ್ಣ ತನಿಖೆಗೆ ಚುನಾವಣಾ ಆಯೋಗ ಆದೇಶಿಸಬೇಕು ಎಂದರು. ಇದೇ ವೇಳೆ ಮತದಾನದಿಂದ ವಂಚಿತರಾದವ್ರು ಕೂಡಾ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

Related posts

Leave a Reply

Your email address will not be published. Required fields are marked *