Header Ads
Header Ads
Header Ads
Breaking News

ವ್ಯಕ್ತಿಯೊಬ್ಬನಿಗೆ 7 ಲಕ್ಷಕ್ಕೂ ಅಧಿಕ ಹಣ ಹಂಚಿ ಪರಾರಿ

ಪುತೂರು ಕಡೆಯಿಂದ ಬಂದ ಅಪರಿಚಿತ ವ್ಯಕ್ತಿಗಳು ಜಾಲ್ಸೂರು ಗೇಟ್ ಬಳಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಹಣ ನೀಡಿ ಪರಾರಿಯಾಗಲು ಯತ್ನಿಸಿದ್ದಾಗ ಅವರನ್ನು ಬೆಂಬತ್ತಿ ಹಿಡಿದ ಸುಳ್ಯ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.


ಪತ್ತೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಲ್ಲಿ ಬಂದ ಯುವಕರು ಇಬ್ಬರು ಸೂಟ್‌ಕೇಸ್ ನೊಂದಿಗೆ ಬಂದು ಜಾಲ್ಸೂರು ಗೇಟ್ ಬಳಿ ಇಳಿದುಕೊಂಡು ಕಾಯುತ್ತಿದ್ದರು.ಆಗ ಒಬ್ಬ ಸ್ಥಳೀಯ ಯುವಕ ಬಂದು ಸುಮಾರು 7  ಲಕ್ಷ ಹಣವನ್ನು ತೆಗೆದುಕೊಂಡು ಹಿಂದಿರುಗಿದ್ದ. ಯುವಕರು ಮತ್ತೆ ಪುತ್ತೂರು ಕಡೆಗೆ ಕೆ.ಎಸ್.ಆರ್.ಟಿ.ಸಿ  ಬಸ್ ನಲ್ಲಿ ಹತ್ತಿ ಪುತ್ತೂರಿನತ್ತ ಹೋದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.ಆಗ ಪೊಲೀಸರು ಅಮ್ಚಿನಡ್ಕ ಸಮೀಪ ಬಸ್ಸನ್ನು ತಡೆದು ನಿಲ್ಲಿಸಿ ಇಬ್ಬರು ಯುವಕರನ್ನು ಸೂಟ್‌ಕೇಸ್ ಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡಸಿದ್ದಾಗ ಸುಮಾರು 26 ಲಕ್ಷ ರೂಪಾಯಿ ಪತ್ತೆಯಾಗಿದೆ. ಇದೀಗ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವರದಿ: ತೇಜೇಶ್ವರ್ ತೊಡಿಕಾನ ಬೆಳ್ಳಾರೆ

 

Related posts

Leave a Reply