Header Ads
Breaking News

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ : ಕಾಸರಗೋಡು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ

ಮಂಜೇಶ್ವರ: ಕಾಸರಗೋಡು ಜಿಲ್ಲೆಯಲ್ಲಿ ನಿಯಂತ್ರಣವಿಲ್ಲದೆ ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರ ಜನತಾ ಕರ್ಪ್ಯೂ ನ ಬಳಿಕ ಕಾಸರಗೋಡು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೆ ಬಂದಿದೆ.

ಕೊರೋನಾ ಬಾಧಿತರಿಗೆ ಐಸೋಲೆಶನ್ ವಾರ್ಡ್‍ಗಳು ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲೂ ಸಜ್ಜೀಕರಿಸಿರುವುದಾಗಿ ಮಂಜೇಶ್ವರ ಗ್ರಾಮ ಪಂಚಾಯತು ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಮುಕ್ತಾರ್ ಎ ತಿಳಿಸಿದ್ದಾರೆ. ಸೆಕ್ಷನ್ ಜ್ಯಾರಿಗೆ ಬಂದ ಬಳಿಕ ಸೆಕ್ಷನ್ ಜಾರಿಯಲ್ಲಿದ್ದರೂ ಅಲ್ಲಲ್ಲಿ ಸಾರ್ವಜನಿಕರು ಎಂದಿನಂತೆ ರಸ್ತೆಗಿಳಿದಾಗ ಇದನ್ನು ಮಾಧ್ಯಮದವರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ನೇರವಾಗಿ ರಸ್ತೆಗಿಳಿದ ಜಿಲ್ಲಾಧಿಕಾರಿ ಪೊಲೀಸ್  ಅಧಿಕಾರಿಗಳನ್ನು ತರಾಟೆಗೆ ತೆಗೆದು ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಅನಾವಶ್ಯಕವಾಗಿ ರಸ್ತೆಗಿಳಿಯುತ್ತಿರುವ ವಾಹನಗಳನ್ನು ಪೆÇಲೀಸರು ತನಿಖೆ ನಡೆಸಿಯೇ ಮುಂದೆ ಸಂಚರಿಸಲು ಅನುವು ಮಾಡಿಕೊಡುತಿದ್ದರು. ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಹಕರಿಸದೇ ಹೋದರೆ ನಿಯಂತ್ರಣ ಕೈ ಮೀರಿ ಹೋಗಬಹುದು ಈ ನಿಟ್ಟಿನಲ್ಲಿ ಎಲ್ಲಾ ನಾಗರಿಕರು ಜಿಲ್ಲಾಡಳಿತದ ಆದೇಶವನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿ ಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *