Breaking News

ವ್ಯಾಪಾರೀಕರಣದಿಂದ ಮರೆತ ಸುತ್ತಮುತ್ತಲಿನ ಗಿಡ ಮರ, ಮಂಗಳೂರಿನಲ್ಲಿ ಜಿ. ಪಂ. ಸಿಇಒ ಡಾ. ಎಂ. ಆರ್. ರವಿ


ನಮ್ಮ ಮನೆಯ ಸುತ್ತಮುತ್ತ ಬೆಳೆದಿರುವ ಗಿಡ ಮರಗಳ ಮಹತ್ವವನ್ನು ಮರೆತು ಎಲ್ಲವನ್ನೂ ವ್ಯಾಪಾರೀಕರಣದ ಉದ್ದೇಶದಿಂದ ನೋಡುವ ಪರಿಸ್ಥಿತಿ ಸೃಷ್ಟಿಯಾಗಿರುವುದು ದುರಂತ ಎಂದು ಜಿಲ್ಲಾ ಪಂಚಾಯತ್ ಸಿಇಓ ಡಾ. ಎಂ. ಆರ್. ರವಿ ಹೇಳಿದರು.
ಮಂಗಳೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಸಾಮಾಜಿಕ ಅರಣ್ಯ ವಿಭಾಗ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಡೆದ ಜೈವಿಕ ವೈವಿಧ್ಯ ಅಧಿನಿಯಮ-೨೦೦೨ ಬಗ್ಗೆ ಅರಿವು ಮೂಡಿಸುವ ಶಿಬಿರದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ಭತ್ತ ಬೆಳೆಯುವ ಜಾಗ, ಹಾಗೂ ಹಾಲು ಕೊಡುವ ಪ್ರಾಣಿಗಳ ಬಗ್ಗೆ ಗೊತ್ತಿಲ್ಲ. ಕಂಪ್ಯೂಟರ್ ಯುಗದ ಪ್ರಭಾವದಿಂದಾಗಿ ಜೀವ ವೈವಿಧ್ಯತೆ ಬಗ್ಗೆ ಅರಿಯುವ ಕುತೂಹಲ ಕಡಿಮೆಯಾಗಿದ್ದು. ಇನ್ನೊಂದೆಡೆ ವ್ಯಾಣೀಜ್ಯೀಕರಣದ ಪ್ರಭಾವದಿಂದಾಗಿ ಜೀವ ವೈವಿಧ್ಯತೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಕಂಡು ಬರುತ್ತಿದೆ. ಜೀವಿಗಳು ಬದುಕಿದ್ದಾಗ ಮಾತ್ರ ವೈವಿಧ್ಯತೆ ಇರಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗೆ ಸಸಿಗಳನ್ನು ನೀಡುವ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಹರೀಶ್ ಭಟ್ ಹಾಗೂ ಜಿ. ಟಿ. ಸುದರ್ಶನ್ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Related posts

Leave a Reply