Header Ads
Breaking News

ಶಂಭೂರಿನಲ್ಲಿ ಮಲಗಿದ್ದ ಯುವಕನ ಇರಿದು ಕೊಲೆ, ಕೋಳಿ ಬಾಳಿನಿಂದ ಇರಿದು ಆರೋಪಿ ಪರಾರಿ

ಬಂಟ್ವಾಳ ತಾಲೂಕು ಶಂಭೂರು ಸಮೀಪ ಮಲಗಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.
ಕೊಲೆಯಾದ ಯುವಕನನ್ನು ಗಣೇಶ್ ಎಂಬವರ ಪುತ್ರ ೨೬ರ ರಂಜಿತ್ ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೊಡಂಗೆಕೋಡಿಯಲ್ಲಿ ಈ ಯುವಕನ ಕೊಲೆಯಾಗಿದ್ದು, ಕೋಳಿ ಅಂಕಕ್ಕೆ ಬಳಸುವ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ರಂಜಿತ್‌ನ ದೊಡ್ಡಪ್ಪನ ಮಗ ೨೪ರ ರಾಜೇಶ್‌ನಿಂದ ಕೊಲೆ ನಡೆದಿದೆ ಎನ್ನಲಾಗಿದ್ದು, ಘಟನೆ ಬಳಿಕ ಆರೋಪಿಯು ಪರಾರಿಯಾಗಿದ್ದಾನೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.