Header Ads
Header Ads
Header Ads
Breaking News

ಶಂಸುಲ್ ಉಲಮಾ ಸೋಷಿಯಲ್ ಟ್ರಸ್ಟ್ ಸೇವಾ ಸಂಸ್ಥೆ ಉದ್ಘಾಟನೆ ಸೆ.14ರಂದು ಪುತ್ತೂರಿನಲ್ಲಿ ಪ್ರಮಾಣಪತ್ರ, ಪ್ರತಿಜ್ಞಾವಿಧಿ ಬೋಧನೆ

ಪುತ್ತೂರು: ಅನಾರೋಗ್ಯ ಪೀಡಿತ ಬಡ-ನಿರ್ಗತಿಕ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪ್ರಾರಂಭವಾದ ಶಂಸುಲ್ ಉಲಮಾ ಸೋಷಿಯಲ್ ಟ್ರಸ್ಟ್‌ನ ಉದ್ಘಾಟನೆ, ಮಜ್ಲಿಸ್‌ನ್ನೂರು, ಪ್ರಮಾಣ ಪತ್ರ ಸ್ವೀಕಾರ ಹಾಗೂ ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮ ಸೆ. 14ರಂದು ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಶಂಸುಲ್ ಉಲಮಾ ಸೋಷಿಯಲ್ ಟ್ರಸ್ಟ್ ಸೇವಾ ಸಂಸ್ಥೆಯ ಶರಿಯತ್ ಸಲಹೆಗಾರ ಹುಸೈನ್ ದಾರಿಮಿ ರೆಂಜಿಲಾಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 11.30ಕ್ಕೆ ಮಜ್ಲಿಸ್‌ನ್ನೂರು ನಡೆಯಲಿದ್ದು, ಪೋಳ್ಯ ಜುಮಾ ಮಸೀದಿ ಖತೀಬ ಅಲ್‌ಹಾದಿ ಯಹಿಯಾ ತಂಙಳ್ ನೇತೃತ್ವ ವಹಿಸಲಿರುವರು. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರಿನ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾ ನೆರವೇರಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯದ್ ಅಲಿ ತಂಙಳ್ ಕುಂಬೋಲ್ ಮಾಡಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಖಾಝಿ ಶೈಖುನಾ ತ್ವಾಜಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಶಾವರ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರದ ಉಪಾಧ್ಯಕ್ಷ ಶೈಖುನಾ ಕೆ.ಪಿ. ಅಬ್ದುಲ್ ಖಾದರ್ ಮುಸ್ಲಿಯಾರ್ ಮಿತ್ತಬೈಲು ಅನುಗ್ರಹ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ. ಅಬೂಬಕ್ಕರ್ ಮುಲಾರ್, ಉಪಾಧ್ಯಕ್ಷರಾದ ಬರೀರಾ ಹಾಜಿ ದಾರಂದಕುಕ್ಕು, ಉಮ್ಮರ್ ಹಾಜಿ ಕೋಡಿಯಾಡಿ ಹಾಗೂ ಶರಿಯತ್ ಸಲಹೆಗಾರ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಉಪಸ್ಥಿತರಿದ್ದರು.

ವರದಿ: ಅನೀಶ್ ಪುತ್ತೂರು

Related posts

Leave a Reply