Header Ads
Breaking News

ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ,ಅಂತರರಾಷ್ಟ್ರೀಯ ಮಟ್ಟದ ಡೌನ್ ಸಿಂಡ್ರೋಮ್ ದಿನಾಚರಣೆ

ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಡೌನ್ ಸಿಂಡ್ರೋಮ್ ದಿನಾಚರಣೆ ಮತ್ತು ಬಾಚಿ ಬಾಲ್ ಚಾಂಪಿಯನ್ ಶಿಪ್-2019 ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ್ದ ವೆಂಕಟ್ರಮಣ ದೇವಳದ ಪುರೋಹಿತರಾದ ಜಯರಾಮ್ ಭಟ್ ಚಿಕ್ಲಂಕರ್ ಅವರು ಕಾರ್ಯಕ್ರಮಕ್ಕೆ ಮತ್ತು ಸಾನಿಧ್ಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇದೇ ವೇಳೆ ಸಾನಿಧ್ಯ ವಸತಿಯುತ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ ಅವರು, ಸಾನಿಧ್ಯದಲ್ಲಿರುವ ಮಕ್ಕಳು ನಮಗೆ ಪ್ರೀತಿ ಪಾತ್ರರು. ಈಗಾಗಲೇ ಇಬ್ಬರು ವಿದ್ಯಾರ್ಥಿಗಳು ಚಿನ್ನಮ ಬೆಳ್ಳಿ ಮತ್ತು ಕಂಚಿನ ಪದಕವನ್ನು ಪಡೆದುಕೊಂಡು ವಿಶೇಷ ಸಾಧನೆ ಮಾಡಿದ್ದಾರೆ ಎಂದ ಅವರು, ನಮ್ಮ ಸಾನಿಧ್ಯ ಸಂಸ್ಥೆ ಬೆಳವಣಿಗೆಯನ್ನು ಹೊಂದುತ್ತಿದೆ ಎಂದು ಹೇಳದರು.

ಇದೇ ವೇಳೆ ನಡೆದ ಬಾಚಿ ಚಾಂಪಿಯನ್‌ಶಿಪ್‌ಗೆ ವೆಂಕಟ್ರಮಣ ದೇವಸ್ಥಾನದ ಟ್ರಸ್ಟೀ ಕೆ.ಪಿ. ಪ್ರಶಾಂತ್ ರಾವ್ ಅವರು ಚಾಲನೆ ನೀಡಿದರು.ಇದೇ ವೇಳೆ ವಿದ್ಯಾರ್ಥಿಗಳಿಗೆ ಬಾಚಿ ಸ್ಪರ್ಧೆ ನಡೆಯಿತು. ಸಾನಿಧ್ಯ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ಕಾರ್ಯಕ್ರಮ ನೋಡುಗರ ಮನ ಸೆಳೆಯಿತು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ಸಮಾಜ ಮಂಗಳೂರಿನ ಅಧ್ಯಕ್ಷರಾದ ಜೀವನ್ ಬೆಳ್ಳಿಯಪ್ಪ, ಬಲ್ಮಠದ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಲಯನ್ ಜಾರ್ಜ್ ಡಿಸೋಜಾ, ಶ್ರೀ ಗಣೇಶ್ ಸೇವಾ ಟ್ರಸ್ಟ್‌ನ ಮಹಾಬಲ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *