Header Ads
Header Ads
Breaking News

ಶಕ್ತಿನಗರ ಸಾನಿಧ್ಯ ಭಿನ್ನ ಸಾಮಾರ್ಥ್ಯದ ಮಕ್ಕಳಿಂದ ಮಹಿಷಿ ಮೋಕ್ಷ ಯಕ್ಷಗಾನ ಬಯಲಾಟ

ಬಿಕರ್ನಕಟ್ಟೆಯ ಶ್ರೀ ಕ್ಷೇತ್ರ ಬಲಮುರಿ ಸಿದ್ಧಿ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದವರ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ಮಕ್ಕಳಿಂದ ಮಹಿಷಿ ಮೋಕ್ಷ ಎಂಬ ಯಕ್ಷಗಾನ ಬಯಲಾಟ ನಡೆಯಿತು.


ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳು ಅಭಿಯನಿಸಿದ ಮಹಿಷಿ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನ ಅತ್ಯುತ್ತಮವಾಗಿ ಮೂಡಿ ಬಂತು. ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ತಮ್ಮ ತಮ್ಮ ಅಭಿನಯವನ್ನು ಮಾಡಿ ತೊರಿಸಿದ್ದು, ಎಲ್ಲರ ಮನಸೂರೆಗೊಳಿಸಿತು. ಶರತ್‌ಕುಮಾರ್ ಕದ್ರಿ ನಿದೇರ್ಶನದ, ಸುಚೇತ್ ಕುಮಾರ್ ಹಾಗೂ ದೀಕ್ಷಿತ್ ಸಹ ನಿದೇರ್ಶನಲ್ಲಿ ಮೂಡಿಬಂತು.
ಅನಂತರ ವಸಂತ ಕುಮಾರ್ ಶೆಟ್ಟಿ ನಿರ್ದೇಶನದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳಿಂದ ಅಮರ್ ಜವಾನ್ ಪ್ರಹಸನ ನಡೆಯಿತು. ಈ ಪ್ರಹಸನ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು.
ವರದಿ: ನಾಗರಾಜ್ ಮಂಗಳೂರು

Related posts

Leave a Reply