Header Ads
Header Ads
Breaking News

ಶತಮಾನೋತ್ಸವದ ಸಂಭ್ರಮದಲ್ಲಿ ಕಾಬೆಟ್ಟು ಶಾಲೆ: ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿದೆ ಕಟ್ಟಡ

 

ಕಾರ್ಕಳದ ಕಾಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದೆ. ಆದರೆ ಇದರಿಂದ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯೊಂದನ್ನು ಈ ಶಾಲೆಯ ಹಳೆ ವಿದ್ಯಾರ್ಥಿ ಸಮಿತಿಯವರು ತಂದೊಡ್ಡಿದ್ದಾರೆ. ಸಾರ್ವಜನಿಕ ರಸ್ತೆ ಮಧ್ಯೆ ಅಕ್ರಮ ಕಟ್ಟಡ ನಿರ್ಮಿಸಲು ಹೊರಟಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕಾಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಸುಮಾರು 100 ವರ್ಷಗಳ ಇತಿಹಾಸವಿರುವ ಶಾಲೆ ಈ ಶಾಲೆಯ ಶತಮಾನೋತ್ಸವ ಸಮಾರಂಭ ಇನ್ನು ಕೆಲವೇ ತಿಂಗಳಲ್ಲಿ ಬಹು ಅದ್ದೂರಿಯಾಗಿ ಜರಗಲಿದೆ. ಈ ಸಂದರ್ಭದಲ್ಲಿ ಈ ಶಾಲೆ ಹಳೆ ವಿದ್ಯಾರ್ಥಿ ಸಮಿತಿಯವರು ಸಾರ್ವಜನಿಕ ರಸ್ತೆ ಮಧ್ಯದಲ್ಲಿ ಸುಮಾರು 50 ಮನೆಗಳಿಗೆ ಹೋಗುವ ದಾರಿಯ ಮದ್ಯದಲ್ಲಿ ಶತಮಾನೋತ್ಸವದ ಸವಿ ನೆನಪಿಗಾಗಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಸುಮಾರು 50 ಮನೆಗಳಿಗೆ ಹೋಗುವ ಸಂಪರ್ಕ ಕಡಿತಗೊಳ್ಳುತ್ತದೆ. ಅದಲ್ಲದೆ ಕಟ್ಟಡ ಕಟ್ಟಲು ಪುರಸಭೆಯಿಂದಾಗಲಿ, ಸ್ಥಳೀಯ ಆಡಳಿತದಿಂದಾಗಲಿ ಯಾವ ಪರವಾನಿಗೆಯೂ ಪಡೆಯಲಾಗಲಿಲ್ಲವೆಂದು ಇಲ್ಲಿಯ ಸ್ಥಳೀಯ ಚುನಾಯಿತ ಪುರಸಭೆ ಸದಸ್ಯರಾದ ರಹಮತ್ ಅವರು ಹೇಳುತ್ತಾರೆ.

ಈ ಕಟ್ಟಡದಿಂದ ಅಪಘಾತವಾಗುವ ಸಾಧ್ಯತೆಯಿದೆ. 1974 ಕರ್ನಾಟಕ ಉಚ್ಛನ್ಯಾಯಾಲವು ಈ ದಾರಿಯನ್ನು ಯಥಾ ಸ್ಥಿತಿ ಕಾಪಾಡಬೇಕು ಎಂಬ ತೀರ್ಪು ಕೊಟ್ಟಿದೆ. ಇಷ್ಟೆಲ್ಲ ಗೊತ್ತಿದ್ದು ಕೂಡ ಶತಮಾನೋತ್ಸವ ಸಮಿತಿಯವರು ತಮ್ಮ ಮೊಂಡು ಹಠವನ್ನು ಬಿಡದೆ ಸಾರ್ವಜನಿಕ ರಸ್ತೆಯಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. 20 ವರ್ಷಗಳ ಹಿಂದೆ ಈ ಶಾಲೆಯಲ್ಲಿ 1500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಈಗ ಕೇವಲ 150 ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಾಡುತ್ತಿರುವಾಗ ಇನ್ನು ಶಾಲೆಗೆ ಕೊಠಡಿಯ ಅಗತ್ಯವಿದೆಯಾ ಎಂದು ಸ್ಥಳೀಯರ ಪ್ರಶ್ನೆ.

Related posts

Leave a Reply