Header Ads
Header Ads
Breaking News

ಶತಮಾನೋತ್ಸವ ಸಂಭ್ರಮದಲ್ಲಿ ಪೆರುವಾಯಿ ಶಾಲೆ

ವಿಟ್ಲದ ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಬೈಕಂಪಾಡಿ ವೆಸ್ಟರ್ನ್ ಡಾಟಾ ಫಾರ್ಮ್ಸ್ ನ ಚಂದ್ರಶೇಖರ ರೈ ಮಾತನಾಡಿ ಸಂಭ್ರಮದ ಜತೆಯಲ್ಲಿ ನಮಗೆ ಜವಾಬ್ದಾರಿ ಇದೆ. ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ಅಗತ್ಯ. ಹಳೆ ವಿದ್ಯಾರ್ಥಿಗಳು ಒಟ್ಟಾಗಿ ಮನಸ್ಸು ಮಾಡಿದಾಗ ಶಾಲೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಶಾಲಾ ಸಂಚಾಲಕ ಸಚಿನ್ ಅಡ್ವಾಯಿ ಅಧ್ಯಕ್ಷತೆ ವಹಿಸಿದ್ದರು. ಪೆರುವಾಯಿ ಎಸ್ ಎಸ್ ಎಫ್ ವತಿಯಿಂದ ಗ್ರೈಡರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಗೌರವ ಶಿಕ್ಷಕರನ್ನು ಗೌರವಿಸಲಾಯಿತು. ಕ್ರೀಡೆಯಲ್ಲಿ ಸಾಧನೆಗೈದ ಹಾಗೂ ವಿವಿಧ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಹಿರಿಯ ಶಿಕ್ಷಕರಾದ ಗೋವಿಂದ ಭಟ್, ರಾಮ್ ಭಟ್, ಬಾಲಕೃಷ್ಣ ಭಂಡಾರಿ, ನರಸಿಂಹ ಭಟ್, ಖಲಿಸ್ತಾ ಮೊಂತೆರೊ, ಗೀತಾ, ರಾಮಯ್ಯ ಶೆಟ್ಟಿ, ಪಂಜ ಸಂಜೀವ ಶೆಟ್ಟಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಕುಂಞ ನಾಯ್ಕ ಹಾಗೂ ಶಿಕ್ಷಕರಾದ ಪ್ರಭಾಕರ ಯಂ, ಎ ವಿಷ್ಣು ಭಟ್, ಜಯರಾಮ ರೈ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ಸೆಂಟರ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್‌ನ ಮಾಜಿ ಚೇಯರ್ ಮ್ಯಾನ್ ಜಿ ರಘುನಾಥ ರೈ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಬಂಟ್ವಾಳ ತಾಲ್ಲೂಕು ವಿಸ್ತಣಾಧಿಕಾರಿ ಸದಾಶಿವ ಅಳಿಕೆ, ಶಿಕ್ಷಣ ಸಂಯೋಜಕಿ ಪುಷ್ಟಾ, ಮಕ್ಕಳ ಲೋಕದ ಗೌರವಾಧ್ಯಕ್ಷೆ ಸವಿತಾ ಎಸ್ ಭಟ್ ಅಡ್ವಾಯಿ, ರಾಜೇಂದ್ರ ರೈ, ನಾಗೇಶ್ ಮಾಸ್ಟರ್ ಪುತ್ತೂರು, ಶಿಕ್ಷಕಿಯಾದ ಶ್ವೇತಾ, ಸೆಲ್ಮಾ ಬೀಬಿ, ಸಮೀಮ, ರಾಜೇಶ್ವರೀ ಉಪಸ್ಥಿತರಿದ್ದರು.

 

Related posts

Leave a Reply