Header Ads
Header Ads
Breaking News

ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿನ್ನಲೆ:ಹಿಂದೂ ಸಂಘಟನೆಯ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ

ಸುಪ್ರೀಂಕೋರ್ಟಿನ ತೀರ್ಪು ಅನಾದಿಕಾಲದಿಂದಲೂ ಶಬರಿಮಲೆಯಲ್ಲಿ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಇದನ್ನ ಮರುಪರಿಶೀಲಿಸಬೇಕು ಹಾಗೂ ಸರಕಾರದ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ಗಣೇಶ್ ಹೊಸಬೆಟ್ಟು ಅವರು ಹೇಳಿದರು. ಮಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್‌ನ ತೀರ್ಪು ಬಹುಸಂಖ್ಯಾತ ಅಯ್ಯಪ್ಪ ಭಕ್ತರ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ ಅಲ್ಲದೆ ಹಸಿದ ಬುದ್ಧಿಜೀವಿಗಳಿಗೆ ಶಬರಿಮಲೆಗೆ ಸಂಬಂಧಿಸಿದ ತೀರ್ಪು ಚಪ್ಪರಿಸಲು ಸರಿಯಾಗಿ ಸಿಕ್ಕಂತಾಗಿದೆ ಎಂದರು.
ಈ ನಿಟ್ಟಿನಲ್ಲಿ ಅಯ್ಯಪ್ಪ ಭಕ್ತವೃಂದ ಸುರತ್ಕಲ್ ಕುಳಾಯಿ ವಲಯ ಹಿಂದೂ ಸಂಘಟನೆಯ ಆಶ್ರಯದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತದೆ ಎಂದು ಹೇಳಿದರು.

Related posts

Leave a Reply