Header Ads
Header Ads
Breaking News

ಶಬರಿಮಲೆಗೆ ಮಹಿಳೆಯರ ಪ್ರವೇಶ ಹಿನ್ನಲೆ: ಕೇರಳದಲ್ಲಿ ಹರತಾಳಕ್ಕೆ ಕರೆ

ಪುತ್ತೂರು: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರಿಬ್ಬರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಕೇರಳದಲ್ಲಿ ಹರಾತಾಳಕ್ಕೆ ಕರೆ ನೀಡಿರುವ ವೇಳೆ ಬಾಯಾರು ಪದವು ಹಾಗೂ ಮುಳಿಗದ್ದೆ ಎಂಬಲ್ಲಿ ಹಿಂದು ಯುವಕರಿಬ್ಬರ ಮೇಲೆ ಮುಸ್ಲಿಂ ಯುವಕರ ತಂಡದಿಂದ ಹಲ್ಲೆ ನಡೆದಿದ್ದು ಗಾಯಾಳುಗಳು ಪುತ್ತೂರು ಆಸ್ಪತ್ರಗೆ ದಾಖಲಾಗಿದ್ದಾರೆ.
ಮಂಜೇಶ್ವರ ತಾಲೂಕು ಬಾಯಾರುಪದವು ದಲಿಕುಕ್ಕು ಹರೀಶ್ ಹಾಗೂ ಬಾಯಾರು ಪೈವಳಿಕೆ ಮುಟ್ಟಾಜೆ ಸಂದೀಪ್ ಹಲ್ಲೆಗೊಳಗಾದವರು. ಜ.1 ರಂದು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರಿಬ್ಬರು ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದದ್ಯಂತ ಜ.೨ರಂದು ಹರಾತಾಳಕ್ಕೆ ಕರೆ ನೀಡಲಾಗಿತ್ತು. ಬಾಯಾರು ಪದವು ಕ್ಯಾಂಪ್ಕೋದಲ್ಲಿ ವಾಚ್‌ಮೆನ್ ಕೆಲಸ ಮಾಡುತ್ತಿರುವ ನಾನು ಮಧ್ಯಾಹ್ನದ 1.30ರ ವೇಳೆಗೆ ಊಟಕ್ಕೆ ಮನೆಗೆ ತೆರಳುತ್ತಿರುವ ವೇಳೆ ಎದುರಿನಿಂದ ಬಂದ ಖಲೀಲ್ ಪದವು, ಜಮಾಲ್, ಬದ್ರುದ್ದೀನ್, ಝಕಾರಿಯಾ, ಆದಂ ಮೊಲಾರ್, ಅಬೂಬಕ್ಕರ್ ಸಿದ್ದಿಕ್, ಅನ್ಸಪ್ ಸೇರಿದಂತೆ ಸುಮಾರು 25 ಜನರ ತಂಡ ರಾಡ್, ತಲವಾರು ಮೊದಲಾದ ಮಾರಕಾಯುಧಗಳನ್ನು ಹಿಡಿದುಕೊಂಡು ನನ್ನನ್ನು ಓಡಿಸಿಕೊಂಡು ಬಂದು ನೀನು ಹರಾತಾಳಕ್ಕೆ ಸಹಕಾರ ಮಾಡುತ್ತೀಯಾ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ರಾಡ್, ತಲವಾರಿನಿಂದ ನನ್ನ ತಲೆ, ಬೆನ್ನು ಹಾಗೂ ಕೈಗಳಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ನಾವು ಸಂಘ ಪರಿವಾರದಲ್ಲಿ ಕೆಲಸ ಮಾಡುತ್ತಿದ್ದು ನಮ್ಮನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ತಲೆಗೆ ಗಾಯಗೊಂಡಿದ್ದ ನನ್ನನ್ನು ವಿಶ್ವಹಿಂದು ಪರಿಷತ್, ಬಜರಂಗದಳ ಹಾಗೂ ಸಂಘಟನೆಯ ಪ್ರಮುಖರು ನನ್ನನ್ನು ಆಸ್ಪತ್ರಗೆ ದಾಖಲಿಸಿದ್ದಾರೆ ಎಂದು ಗಾಯಾಳು ಹರೀಶ್ ಆರೋಪಿಸಿದ್ದಾರೆಮುಳಿಗದ್ದೆಯಲ್ಲಿ ಹಲ್ಲೆ:
ಮುಳಿಗದ್ದೆ ಸಮೀಪ ಗ್ಯಾರೇಜ್‌ನಲ್ಲಿ ನಾನು ಉದ್ಯೋಗಿಯಾಗಿದ್ದೇನೆ. ಹರಾತಾಳದ ಹಿನ್ನೆಲೆಯಲ್ಲಿ ಗ್ಯಾರೇಜ್ ಬಂದ್ ಮಾಡಲಾಗಿದ್ದು ನಾನು 11 ಗಂಟೆ ವೇಳೆಗೆ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಮುಳಿಗದ್ದೆ ಎಂಬಲ್ಲಿ ಆಸ್ಪಕ್, ಅನ್ವರ್, ಜಮಲ್, ಜಲೀಲ್ ಸೇರಿದಂತೆ ೨೦ ಜನರ ತಂಡ ನನ್ನನ್ನು ತಡೆದು ನೀನು ಕರ್ನಾಟಕದ ರಾಜ್ಯದವನೋ ಎಂದು ಪ್ರಶ್ನಿಸಿ ನನ್ನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಇನ್ನೋರ್ವ ಗಾಯಾಳು ಸಂದೀಪ್ ಆರೋಪಿಸಿದ್ದಾರೆ

Related posts

Leave a Reply