Header Ads
Header Ads
Breaking News

ಶಬರಿಮಲೆಯಲ್ಲಿ ಸಂಘರ್ಷ ಸೃಷ್ಟಿಯಾದರೆ ಆರ್‌ಎಸ್‌ಎಸ್ ಕಾರಣ:ಕೋಡಿಯೇರಿ ಬಾಲಕೃಷ್ಣನ್

ಮಂಜೇಶ್ವರ: ಶಬರಿಮಲೆ ವಿಷಯದಲ್ಲಿ ಕೇರಳದಲ್ಲಿ ಸಂಘರ್ಷವೇನಾದರೂ ಸೃಷ್ಟಿಯಾದರೆ ಅದರ ಪೂರ್ಣ ಜವಾಬ್ದಾರಿ ಆರೆಸ್ಸಸ್ ಹಾಗೂ ಸಂಘಪರಿವಾರವಾಗಿರುವುದಾಗಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲ ಕೃಷ್ಣನ್ ಹೇಳಿದರು.ಉಪ್ಪಳ ಸೋಂಕಾಲು ನಿವಾಸಿ ಅಬೂಬಕ್ಕರ್ ಸಿದ್ದೀಖ್ ಕುಟುಂಬಕ್ಕೆ ಡಿ ವೈ ಎಫ್ ಐ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಲಾದ ಸಹಾಯಧನ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉಚ್ಚ ನ್ಯಾಯಾಲಯ ಅಲ್ಲ ವಿಶ್ವಾಸವಾಗಿದೆ ಪ್ರಧಾನವಾದದ್ದು ಎಂಬುದಾಗಿ ಶಬರಿಮಲೆ ವಿವಾದವನ್ನು ಉಂಟು ಮಾಡುತ್ತಿರುವ ಸಂಘಪರಿವಾರದ ಹಾಗೂ ಇವರ ಜೊತೆಯಾಗಿ ಸೇರಿದ ಇತರ ಪಕ್ಷದವರು ಹೇಳುತಿದ್ದಾರೆ. ಇದನ್ನು ಮುಸ್ಲಿಂ ಲೀಗ್ ಕೂಡಾ ಬೆಂಬಲಿಸಿದೆ. ಹಾಗಿದ್ದರೆ ಇದೇ ಉದ್ದೇಶವನ್ನು ಬಾಬರಿ ಮಸೀದಿಯನ್ನು ಕೆಡವಿದ ಪ್ರಕರಣದಲ್ಲೂ ಲೀಗ್ ಉಳಿಸಿಕೊಳ್ಳಬಹುದೇ ಎಂಬುದನ್ನು ಖಾತರಿಪಡಿಸಬೇಕಾಗಿದೆ.ಈ ಸಂದರ್ಭ ಸಂಸದ ಪಿ ಕರುಣಾಕರನ್, ಡಿ ವೈ ಎಫ್ ಐ ರಾಜ್ಯಾಧ್ಯಕ್ಷ ಹಾಗೂ ಶಾಸಕ ಶಂಶೀರ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣನ್, ರಾಜ್ಯ ಸಮಿತಿ ಸದಸ್ಯರುಗಳಾದ ಸತೀಶ್ ಚಂದ್ರ, ಸಿ ಎಚ್ ಕುಂಞಂಬು ಸೇರಿದಂತೆ ಹಲವಾರು ಮಂದಿ ನೇತಾರರು ಉಪಸ್ಥಿತರಿದ್ದರು.

Related posts

Leave a Reply