Header Ads
Header Ads
Breaking News

ಶಬರಿಮಲೆಯ ಐತಿಹಾಸಿಕ ಪರಂಪರೆ ರಕ್ಷಿಸಿ:ಉಡುಪಿಯಲ್ಲಿ ಹಿಂದೂ ಸಂಘಟನೆ ಪ್ರತಿಭಟನೆ

 ‘ಕೇಂದ್ರ ಸರ್ಕಾರ ಶಬರಿ ಮಲೈ ಐತಿಹಾಸಿಕ ಹಾಗೂ ಪರಂಪರೆಯನ್ನು ರಕ್ಷಿಸಲು ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು’ ಎಂದು ರಾಷ್ಟ್ರೀಯ ಹಿಂದೂ ಆಂದೋಲನಕಾರ ವಿಜಯ ಕುಮಾರ್ ಆಗ್ರಹಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ದೇವಸ್ಥಾನ ಪರಂಪರೆ ಕಾಪಾಡಲು ಕಾನೂನು ರೂಪಿಸುವಂತೆ ಹಾಗೂ ಚಿತ್ರ ನಟಿ ಸನ್ನಿ ಲಿಯೋನ್ ಅವರನ್ನು ವೀರಮ್ಮಾದೇವಿ ಚಲನಚಿತ್ರ ನಿಷೇಧಿಸಬೇಕು ಎಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಆಂದೋಲನದ ಅಜ್ಜರಕಾಡಿನ ಸೈನಿಕ ಸ್ಮಾರಕದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನೆಯಲ್ಲಿ ಮಾತನಾಡಿದ ವಿಜಯ್ ಕುಮಾರ್ ಸತಾನ ಧರ್ಮ, ಆಚಾರ, ವಿಚಾರ, ಗ್ರಂಥಗಳ ಮೇಲೆ ನಾಸ್ತಿಕರಿಂದ ನಿರಂತರವಾದ ದೌಜನ್ಯ ನಡೆಯುತ್ತಿದೆ. 12ವರ್ಷಕ್ಕಿಂತ ಮೇಲ್ಪಟ್ಟ ಮತ್ತು ೫೦ ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶ ನಿಷಿದ್ಧ ಎನ್ನುವ ಪರಂಪರೆ ಇದೆ. ಆದರೆ, ಭಕ್ತರಲ್ಲದ ಕೆಲ ವ್ಯಕ್ತಿಗಳು ದೇಗುಲದ ಧಾರ್ಮಿಕ ನಂಬಿಕೆಗಳನ್ನು ಹಾಳು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ತೃಪ್ತಿ ದೇಸಾಯಿಯಂತಹ ವಿಚಾರವಾದಿ ನಾಸ್ತಿಕರು ದೇಗುಲದ ಒಳಗೆ ಪ್ರವೇಶ ಬಯಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗಿರುವುದರಿಂದ ಕೋರ್ಟ್ ಮಹಿಳೆಯರಿಗೆ ಪ್ರವೇಶ ಮಾಡುವ ಆದೇಶ ನೀಡಿದೆ. ಇದು ಬಹು ಸಂಖ್ಯಾರಿಗೆ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಿಂದೂ ಜನ ಜಾಗೃತಿ ವೇದಿಕೆಯ ನವೀನ ಕುಮಾರ್, ಶ್ರೀನಿವಾಸ, ರಮೇಶ, ವಿಶರ್ವನಾಥ ಉಪಸ್ಥಿತರಿದ್ದರು.

Related posts

Leave a Reply