Header Ads
Header Ads
Breaking News

ಶಬರಿಮಲೆಯ ತೀರ್ಪು ಹಿನ್ನಲೆ, ತೀರ್ಪು ವಿರುದ್ಧ ಸಂಘಪರಿವಾರದ ವರ್ತನೆ ಸರಿಯಲ್ಲ : ಎಸ್ ಎಂ ಬಶೀರ್ ಆರೋಪ

ಮಂಜೇಶ್ವರ : ಶಬರಿಮಲೆಗೆ ಸ್ತ್ರೀ ಪ್ರವೇಶದ ವಿಷಯದಲ್ಲಿ ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ದ ಬಿಜೆಪಿ ಸಂಘಪರಿವಾರ ಶಕ್ತಿಗಳು ಒಕ್ಕೊರಳಿನಿಂದ ಆಹ್ವಾನ ನೀಡಿದ ಹರತಾಳದಲ್ಲಿ ಆರೆಸ್ಸಸ್ ಕಾರ್ಯಕರ್ತರು ಕಾಸರಗೋಡು ಜಿಲ್ಲೆಯಲ್ಲಿ ಕೋಮು ಗಲಭೆಯನ್ನು ಸೃಷ್ಟಿಸಲು ಯತ್ನ ನಡೆಸಿರುವುದು ಖಂಡನೀಯವೆಂಬುದಾಗಿ ಪಿಡಿಪಿ ರಾಜ್ಯ ಪ್ರ. ಕಾರ್ಯದರ್ಶಿ ಎಸ್ ಎಂ ಬಶೀರ್ ಆರೋಪಿಸಿದ್ದಾರೆ.

ಈ ಬಗ್ಗೆ ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದಕ್ಕಿಂದ ಮೊದಲು ಕೇರಳ ಹಲವಾರು ಹರತಾಳವನ್ನು ಕಂಡಿದ್ದರೂ ಅದೆಲ್ಲವೂ ಇದಕ್ಕಿಂತ ಭಿನ್ನವಾಗಿತ್ತು. ಆದರೆ ಬಿಜೆಪಿ ಈ ಹರತಾಳ ಮುಸ್ಲಿಂ ಧರ್ಮದ ಅಮಾಯಕರ ಹಾಗೂ ಪೊಲೀಸರ ವಿರುದ್ದ ಬಲಪ್ರದರ್ಶನವನ್ನು ನಡೆಸುವ ಹರತಾಳವಾಗಿತ್ತು.ಮಾತ್ರವಲ್ಲದೆ ಈ ಹರತಾಳದಿಂದ ಬಿಜೆಪಿ ರಾಜಕೀಯ ಲಾಭವನ್ನು ಪಡೆಯಲು ಹುನ್ನಾರ ನಡೆಸಿರುವುದಾಗಿ ಅವರು ಆರೋಪಿಸಿದರು.

ಹರತಾಳ ದಿನದಂದು ಬಾಯಾರು ಜಾರಂ ಪರಿಸರದಲ್ಲಿ ಸಂಘಪರಿವಾರ ತಂಡದಿಂದ ಆಕ್ರಮಣಕ್ಕೆಡೆಯಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯ ನಿಘಾ ಘಟಕದಲ್ಲಿರುವ ಬಾಯಾರು ಕರೀಂ ಮುಸ್ಲಿಯಾರುಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲು ಮುಂದಾಗಬೇಕೆಂದು ಬಶೀರ್ ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಅಬ್ದುಲ್ ರಹ್ಮಾನ್ ಪುತ್ತಿಗೆ, ಯೂನುಸ್ ತಳಂಗರ, ಖಾದರ್ ಲಬ್ಬಾಯ್ಕ್, ಅಸೀಸ್ ಶೇಣಿ, ಹನೀಫ್ ಪೊಸೋಟು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply