Header Ads
Header Ads
Breaking News

ಶಬರಿಮಲೆ ಪಾವಿತ್ರ್ಯತೆ ಉಳಿಸಿ ಹೋರಾಟ: 20ಕ್ಕೂ ಹೆಚ್ಚು ಮಂದಿ ಮೇಲೆ ಪ್ರಕರಣ ದಾಖಲು

ವಿಟ್ಲ: ಶಬರಿಮಲೆ ಪಾವಿತ್ರ್ಯತೆ ಉಳಿಸಿ ವಿಟ್ಲ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ವಿಟ್ಲ ಜೈನ ಬಸದಿಯಿಂದ ದೇಗುಲದವರೆಗೆ ನಡೆದ ಶಾಂತಿ ಮೆರವಣಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಇತ್ತೀಚೆಗೆ ಕೇರಳದ ಶಬರಿಮಲೆ ದೇವಾಸ್ಥಾನದಲ್ಲಿ ಎಲ್ಲಾ ಮಹಿಳೆಯರು ಪ್ರವೇಶಿಸಬಹುದು ಎಂಬುದಾಗಿ ನೀಡಿದ ತೀರ್ಪಿನ ವಿರುದ್ಧವಾಗಿ ನಡೆದ ಶಾಂತಿ ಮೆರವಣಿಗೆ ನೆಪದಲ್ಲಿ ಅಕ್ರಮವಾಗಿ ಜನ ಸೇರಿ ಸಾರ್ವಜನಿಕರಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆ ಮಾಡಿದ್ದಾರೆಂಬ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೆರವಣಿಗೆ ನಡೆಸಿದ ಪರಿಣಾಮ ಸಾರ್ವಜನಿಕ ರಸ್ತೆಯಲ್ಲಿ ನಡೆದಾಡುವ ಜನರಿಗೆ, ವಾಹನಗಳ ಸುಗಮ ಸಂಚಾರಕ್ಕೆ, ವ್ಯಾಪಾರ ವ್ಯವಹಾರಗಳಿಗೆ ತೊಂದರೆಯನ್ನುಂಟು ಮಾಡಿ ಸಾರ್ವಜನಿಕರಿಗೆ ಕಿರುಕುಳ ಉಂಟು ಮಾಡಿರುತ್ತಾರೆ. ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಸೇರಿರುವುದಕ್ಕೆ ಸ್ವ- ಪ್ರಕರಣವನ್ನು ಇಲಾಖೆ ದಾಖಲಿಸಿಕೊಂಡಿದೆ. ಈ ಪೊಲೀಸರ ಈ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಕೆಂಡಮಂಡಲವಾಗಿದೆ.

Related posts

Leave a Reply