Header Ads
Header Ads
Breaking News

ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ಖಂಡನೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನಿಂದ ಜ. 7ರಂದು ಪ್ರತಿಭಟನೆ

ವಿಶ್ವದ ಮೊದಲ ಬೃಹತ್ ಸೌಹಾರ್ದ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಶಕ್ತಿಯನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತಿದ್ದು ಆ ನಿಟ್ಟಿನಲ್ಲಿ ಜ. 7ರಂದು ಬೆಳಗ್ಗೆ 10.00ಗಂಟೆಗೆ ಕೋಟೆಕಾರು ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಉಳ್ಳಾಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್‌ನ ತೊಕ್ಕೊಟ್ಟು ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಬರಿಮಲೆ ಕ್ಷೇತ್ರ ಕೋಟ್ಯಂತರ ಭಕ್ತರ ಶ್ರದ್ಧಾ ಕೇಂದ್ರ. ಹಲವು ಶತಮಾನಗಳಿಂದಲೂ ನಂಬಿಕೊಂಡು ಬಂದಿರುವ ಆಸ್ತಿಕ ಬಾಂಧವರ ನಂಬಿಕೆಗೆ ವಿರುದ್ಧ ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶಾತಿ ವಿರುದ್ಧ ನಾಡಿನೆಲ್ಲಡೆ ಪ್ರತಿಭಟನೆ ನಡೆಯುತ್ತಿದ್ದರೆ ಬಿಜೆಪಿ ಮಾತ್ರ ಧರ್ಮಯುದ್ಧ ಮಾಡುತ್ತಿದೆ. ಕ್ಷೇತ್ರದ ಸಂಪ್ರದಾಯ, ಕಟ್ಟುಕಟ್ಟಳೆ ಮುರಿಯಲಾಗಿದೆ ಎಂದರು.

ಹಾಗೆಯೇ ಕೇಂದ್ರ ಸರಕಾರ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ವಿರೋಧಿಸಿಯೂ ಆ ದಿನ ಪ್ರತಿಭಟನೆ ನಡೆಯಲಿದೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಉಪಾಧ್ಯಕ್ಷ ಮಹಮ್ಮದ್ ಮುಸ್ತಫ ಹರೇಕಳ, ಕೋಶಾಧಿಕಾರಿ ಪುರುಷೋತ್ತಮ ಅಂಚನ್, ಸುರೇಶ್ ಭಟ್ನಗರ, ತಾಲೂಕು ಪಂಚಾಯಿತಿ ಸದಸ್ಯೆ ಸುರೇಖ ಚಂದ್ರಹಾಸ ಉಪಸ್ಥಿತರಿದ್ದರು.

Related posts

Leave a Reply