Header Ads
Breaking News

ಶಬರಿಮಲೆ ‘ಸುಗ್ರಿವಾಜ್ಞೆ’ಗೆ ಅ.1ರಂದು ಪ್ರತಿಭಟನೆ

ಪುತ್ತೂರು : ಹಿಂದೂ ಸಮಾಜದ ಪವಿತ್ರ ಕ್ಷೇತ್ರವಾದ ಶಬರಿಮಲೆಯ ಇತಿಹಾಸವನ್ನು ಗಮನಿಸದೆ ಸಿಪ್ರೀಂ ಕೋರ್ಟು ನೀಡಿರುವ ತೀರ್ಪಿನಿಂದ ಧಾರ್ಮಿಕ ಪರಂಪರೆಗೆ ಧಕ್ಕೆಯಾಗಿದ್ದು, ಈ ತೀರ್ಪನ್ನು ಪುನರ್ ಪರಿಶೀಲಿಸಬೇಕು. ಕೇರಳ ಸರ್ಕಾರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಜತೆಗೆ ಸಂಪ್ರದಾಯಿಕ ಧಾರ್ಮಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಪುತ್ತೂರಿನ ‘ಅಯ್ಯಪ್ಪ ಭಕ್ತ ವೃಂದ’ ಆಗ್ರಹಿಸಿದೆ.ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಅಯ್ಯಪ್ಪ ಭಕ್ತ ವೃಂದ’ದ ಸಂಚಾಲಕ ಅರುಣ್‌ಕುಮಾರ್ ಪುತ್ತಿಲ ಅವರು ಸುಪ್ರೀಂ ಕೋರ್ಟು ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರು ಪ್ರವೇಶಿಸುವಂತೆ ತೀರ್ಪು ನೀಡಿದ್ದು, ಕೇರಳ ಸರ್ಕಾರ ಒತ್ತಡ ತಂದು ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತರುವ ಈ ಕೆಲಸ ಮಾಡಿದೆ ಎಂದು ಆರೋಪಿಸಿದರು.

ಕೇರಳ ರಾಜ್ಯದಲ್ಲಿ ಈ ತೀರ್ಪಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಶಬರಿಮಲೆಯ ಧಾರ್ಮಿಕ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೂಕ್ತಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಸುಪ್ರೀಂ ಕೋರ್ಟಿನ ಈ ತೀರ್ಪಿನ ವಿರುದ್ಧ ಅ. ೧೫ರಂದು ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಲು ಅಯ್ಯಪ್ಪ ಭಕ್ತ ವೃಂದ ತೀರ್ಮಾನಿಸಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದಿಂದ ಮಿನಿವಿಧಾನಸೌಧ ಬಳಿಗೆ ಬಂದು ಪ್ರತಿಭಟನೆ ನಡೆಸಲಾಗುವುದು.ಪುತ್ತೂರು ಅಯ್ಯಪ್ಪ ಭಕ್ತ ವೃಂದದ ಗೌರವಾಧ್ಯಕ್ಷ ಮಾಧವ, ಪ್ರಧಾನ ಕಾರ್ಯದರ್ಶಿ ರಾಜಾರಾಂ ಶೆಟ್ಟಿ ಕೋಲ್ಪೆಗುತ್ತು ,ಸಂಚಾಲಕ ಭಾಮಿ ಅಶೋಕ್ ಶೆಣೈ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Related posts

Leave a Reply