Header Ads
Header Ads
Breaking News

ಶರತ್ ಕೊಲೆ ಆರೋಪಿಗಳ ಮಾಹಿತಿ ಲಭ್ಯ, ಶೀಘ್ರ ಬಂಧನ -ಎಡಿಜಿಪಿ ಅಲೋಕ್ ಮೋಹನ್

ಆರ್‌ಎಸ್‌ಎಸ್‌ನ ಶರತ್ ಕೊಲೆ ಪ್ರಕರಣವನ್ನು ಕೂಲಕುಂಷವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧನ ಮಾಡ್ತೇವೆ ಎಂದು ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.
ಈ ಕುರಿತು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶರತ್ ಮಡಿವಾಳ ಕೊಲೆ ಪ್ರಕರಣಕ್ಕೆ ವಿಶೇಷ ತಂಡ ತನಿಖೆ ರಚನೆ ಮಾಡಲಾಗಿದೆ. ಆರೋಪಿಗಳ ಮಹತ್ಚದ ಸುಳಿವು ಲಭ್ಯವಾಗಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ಸತ್ಯಜಿತ್ ಸುರತ್ಕಲ್ ಮನೆ ಮೇಲೆ ಪೊಲೀಸ್ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಬಲ ಸಾಕ್ಷಿ ಇದ್ದಿದ್ದರಿಂದ ದಾಳಿ ಮಾಡಲಾಗಿದೆ. ದಾಖಲೆ ಇದ್ದುಕೊಂಡೇ ತನಿಖೆ ಮುಂದುವರಿಸುತ್ತಿದ್ದೇವೆ. ಇನ್ನೂ ಬಾಕಿ ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಲಾಗಿದೆ. ಸುಮ್ಮನೆ ಬಂಧನ ಮಾಡುವ ಪ್ರಶ್ನೆ ಯೇ ಇಲ್ಲ ಅಂತಾ ಹೇಳಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಬಿಡೋದಿಲ್ಲ. ಯಾವುದೇ ಪಾರ್ಟಿಯಾದ್ರೂ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಗಲಭೆಯಾದಾಗ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಆ ಕ್ಷಣದಲ್ಲಿ ಗಲಭೆ ತಡೆಯಲು ಯಶಸ್ವಿಯಾಗಿದ್ದಾರೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೭ ಮಂದಿಯ ಬಂಧನವಾಗಿದೆ. ಎಲ್ಲಿಯೂ ಅಮಾಯಕರ ಬಂಧನವಾಗಿಲ್ಲ ಅಂತಾ ಅಲೋಕ್ ಮೋಹನ್ ಸ್ಪಷ್ಟನೆ ನೀಡಿದರು. ಸಾಮಾಜಿಕ ಜಾಲಗಳ ಬಗ್ಗೆ ಮಾತನಾಡಿದ ಅವರು, ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಸುಳ್ಳು ಸುದ್ದಿ ಹಬ್ಬುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ತೇವೆ ಎಂದು ಎಚ್ಚರಿಕೆ ನೀಡಿದರು.

Related posts

Leave a Reply