Header Ads
Header Ads
Breaking News

ಶರತ್ ಕೊಲೆ ಪ್ರಕರಣ ಮಾಹಿತಿ ವಜ್ರದೇಹಿ ಸ್ವಾಮಿ ಪೊಲೀಸ್‌ರಿಗೆ ಕೊಡಲಿ, ನನ್ನ ವಿರುದ್ಧ ಯಾರು ನಿಂತರೂ ತಲೆ ಕೆಡಿಸಿಕೊಳ್ಳುವುದಿಲ್ಲ -ಸಚಿವ ಖಾದರ್

ಆರ್‌ಎಸ್‌ಎಸ್ ಕಾರ್ಯತರ್ಕ ಶರತ್ ಕೊಲೆ ಪ್ರಕರಣದ ಕುರಿತಾಗಿ ಸ್ಫೋಟಕ ಮಾಹಿತಿ ಇದೆಯೆಂದು ವಜ್ರದೇಹಿ ಮಠದ ರಾಜಶೇಖರನಂದ ಸ್ವಾಮೀ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಹಿತಿ ಇದ್ರೆ ಕೂಡಲೇ ಪೊಲೀಸ್ ಇಲಾಖೆಗೆ ನೀಡಿ, ಗೊತ್ತಿರೋ ಮಾಹಿತಿ ಬಚ್ಚಿಡೋದು ಕಾನೂನು ಬಾಹಿರವಾಗಿದೆ ಅಂತಾ ಹೇಳಿದರು. ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ ಕಾನೂನು ಜೊತೆಗೂಡಿ ಜೀವನ ಸಾಗಿಸ್ತಾರೆ, ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದರು.
ನನ್ನ ವಿರುದ್ಧ ಯಾರು ನಿಂತರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಗೆಲ್ಲಿಸೋದು ಬಿಡೋದು ಮತದಾರರಿಗೆ ಬಿಟ್ಟ ವಿಚಾರ. ಇದು ಬಿಜೆಪಿ ನಾಯಕರಿಗೆ ಸಚಿವ ಖಾದರ್ ನೀಡಿರುವ ಟಾಂಗ್, ಇವತ್ತು ಮಂಗಳೂರಿನಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರನ್ನ ನಿಲ್ಲಿಸಿದ್ರೆ ಮಾನ, ಮಾರ್ಯದೆ ಉಳಿಯುತ್ತೆ, ಕಾರ್ಯರ್ತರಿಗೆ ಸಿಗುವಷ್ಟು ವೋಟ್ ಬಿಜೆಪಿ ಮುಖಂಡರಿಗೆ ಸಿಗಲ್ಲ ಅಂತಾ ಸಚಿವರು ಟೀಕಿಸಿದರು.

Related posts

Leave a Reply