Header Ads
Header Ads
Breaking News

ಶರತ್ ಕೊಲೆ ವಿರೋಧಿಸಿ ಬಂಟ್ವಾಳದಲ್ಲಿ ಪ್ರತಿಭಟನೆ, ಬಿ. ಸಿ. ರೋಡ್ ತುಂಬ ಬಿ. ಜೆ. ಪಿ. ನಾಯಕರ ಹೂಂಕಾರ


ಆರ್‌ಎಸ್‌ಎಸ್ ಕಾರ್ಯಕರ್ತ ಸಜೀಪಮುನ್ನೂರಿನ ಶರತ್ ಅವರ ಮೇಲೆ ದುಷ್ಕರ್ಮಿಗಳ ಹತ್ಯೆ ಯತ್ನವನ್ನು ಖಂಡಿಸಿ ಹಿಂದೂ ಹಿತ ರಕ್ಷಣ ಸಮಿತಿ ಕರೆ ನೀಡಿದ ಬೃಹತ್ ಪ್ರತಿಭಟನೆ ಶುಕ್ರವಾರ ಬಿ. ಸಿ. ರೋಡಿನಲ್ಲಿ ಯಶಸ್ವಿಯಾಗಿ ನಡೆದಿದೆ.
ದ. ಕ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ೧೪೪ರನ್ವಯ ನಿಷೇಧಾಜ್ಞೆ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್‌ನ ನಡುವೆಯೂ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲು ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಾಗೂ ಹಿಂದು ಸಂಘಟನೆಗಳ ಪ್ರಮುಖರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ. ಮಂಗಳೂರು ಕಮಿಷನರೇಟ್ ಹೊರತುಪಡಿಸಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಇರುವ ಹಿನ್ನಲೆಯಲ್ಲಿ ಯಾವುದೇ ಪ್ರತಿಭಟನೆಗೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ತಿಳಿಸಿತ್ತು.
ಆ ಪ್ರಕಾರ ಶುಕ್ರವಾರ ಬೆಳಗ್ಗಿನಿಂದಲೇ ಬಿ. ಸಿ. ರೋಡಿನ ಹೆದ್ದಾರಿ ಬದಿಯಲ್ಲಿ ಸುಮಾರು ಎರಡು ಕಿ. ಮೀ. ದೂರದವರೆಗೂ ಪೊಲೀಸ್‌ರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಶ್ಚಿಮ ವಲಯದ ಐಜಿಪಿ ಹರಿಶೇಖರನ್, ಎಸ್ಪಿ ಸುಧೀರ್ ರೆಡ್ಡಿ, ಪ್ರಭಾರ ಎಡಿಷನಲ್ ಎಸ್ಪಿ ವಿಷ್ಣುವರ್ಧನ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಬಿ. ಸಿ. ರೋಡಿನಲ್ಲಿ ಇದ್ದರೂ ಕೂಡ ವಿವಿಧ ಮೂಲೆಗಳಿಂದ ಬಂದ ಸಾವಿರಾರು ಪ್ರತಿಭಟನಕಾರರು ಬಿ. ಸಿ. ರೋಡಿನ ಬಸ್ಸು ನಿಲ್ದಾಣದಲ್ಲಿ ಜಮಾಯಿಸಿದರು. ಪ್ರತಿಭಟನಕಾರರನ್ನು ಪೊಲೀಸರು ಸುತ್ತುವರಿದರೂ ಕೂಡ ಜಗ್ಗದ ಅವರು ಕಾಂಗ್ರೆಸ್ ಸದರಕಾರದ ವಿರುದ್ದ ಧಿಕ್ಕಾರ ಕೂಗಿದರು. ಹಿಂದೂ ಹಿತರಕ್ಷಣ ಸಮಿತಿಯ ಪ್ರಮುಖ ಮುರಳೀಧರ ಹಸಂತಡ್ಕ ಪ್ರತಿಭಟನಕಾರರರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನಕಾರರಿಂದ ಧಿಕ್ಕಾರ ಕೂಗುಗಳು ಹೆಚ್ಚುತ್ತಲೆ ಪೊಲೀಸರು ಒಬ್ಬೊಬ್ಬರನ್ನಾಗಿ ಬಂಧಿಸಿ ಕರೆದೊಯ್ದರು.

Related posts

Leave a Reply