Header Ads
Header Ads
Breaking News

ಶರತ್ ಮಡಿವಾಳ ಹತ್ಯೆಯ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ ಬಿ.ಸಿ ರೋಡ್‌ನಲ್ಲಿ ಎನ್. ತನಿಯಪ್ಪ ಮಡಿವಾಳ ಕಳವಳ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಎಂಬ ಏಕೈಕ ಕಾರಣಕ್ಕೆ ರಾಜಕೀಯ ಬೆಂಗಾವಲಿನಲ್ಲಿ ಶರತ್ ಮಡಿವಾಳ ಮೇಲೆ ಕಳೆದ ಜುಲೈ ೪ರಂದು ಹತ್ಯೆ ನಡೆದಿದೆ. ಇದುವರೆಗೆ ಹತ್ಯೆಯ ಪ್ರಮುಖ ಆರೋಪಿಗಳ ಬಂಧನವಾಗದೇ ಇರುವುದು ನಿಜಕ್ಕೂ ಆಘಾತ ತಂದಿದೆ ಎಂದು ಮೃತ ಶರತ್ ಮಡಿವಾಳ ತಂದೆ ಎನ್.ತನಿಯಪ್ಪ ಮಡಿವಾಳ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಅವರು ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ನನ್ನ ಮಗನ ಸಾವಿಗೆ ನ್ಯಾಯವನ್ನು ಒದಗಿಸಲು ಸಾಧ್ಯವಾಗಿಲ್ಲ, ರಾಜ್ಯ ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಬಾಲಿಶ ಹೇಳಿಕೆ ನೀಡಿದ್ದಲ್ಲದೆ ಸುಳ್ಳ ಸುದ್ದಿಗಳನ್ನು ತನ್ನ ಭಾಷಣದಲ್ಲಿ ಹೇಳಿ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ ಎಂದರು. ಮಗನ ಸಾವಿನ ನೋವಿನೊಂದಿಗೆ ಸಂಘ ಪರಿವಾರದ ಎಲ್ಲಾ ಸ್ವಯಂ ಸೇವಕರು ಭಾಗಿಯಾಗಿದ್ದರು. ಮಗನ ಕಳಕೊಂಡ ದುಃಖದಿಂದ ನಾವಿನ್ನು ಹೊರ ಬಂದಿಲ್ಲ. ಹತ್ಯೆ ಮಾಡಿದವರನ್ನು ಬಂಧಿಸಲಾಗದ ನೀತಿಗೆಟ್ಟ ರಾಜಕೀಯ ವ್ಯವಸ್ಥೆ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹಂತಕರನ್ನು ಬಂಧನ ಮಾಡುವ ಆಶಾಭಾವನೆ ಇತ್ತು. ರಾಜ್ಯ ಸರಕಾರ ಅವರ ವರ್ಗಾವಣೆಯನ್ನು ಮಾಡಿ ಪ್ರಕರಣವನ್ನು ಹಳ್ಳ ಹಿಡಿಯುವಂತೆ ಮಾಡಿದ್ದಾರೆ. ಈ ಬಗ್ಗೆ ಧ್ವನಿ ಎತ್ತದ ಪ್ರತಿಭಾ ಕುಳಾಯಿ ತಮ್ಮ ರಾಜಕೀಯ ಲಾಭಕ್ಕೆ ನನ್ನ ಮಗನ ಹತ್ಯೆಯನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ. ಹತ್ಯೆಯಲ್ಲೂ ರಾಜಕಾರಣ ಮಾಡುವ ಕಾಂಗ್ರೆಸ್ಸಿಗೆ ಇದು ಶೋಭೆಯಲ್ಲ ಎಂದು ತಿಳಿಸಿದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply