Header Ads
Header Ads
Breaking News

ಶರತ್ ಮಡಿವಾಳ ಹತ್ಯೆ ಆರೋಪಿಗಳನ್ನು ಬಂಧಿಸಿಲ್ಲ ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯ ಸುಳ್ಯದಲ್ಲಿ ಬಿಜೆಪಿಯಿಂದ ಪ್ರತಿಭಟನೆ

 

ಬಂಟ್ವಾಳದ ಆರ್.ಎಸ್,ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಳನ್ನು ಒಂದು ತಿಂಗಳು ಕಳೆದರೂ ಬಂಧಿಸಿಲ್ಲ. ಕೊಲೆಗೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಿಬೇಕೆಂದು ಒತ್ತಾಯಿಸಿ ಭಾರತೀಯ ಜನಾತ ಪಾರ್ಟಿ ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ತಾಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.

ಧರಣಿ ಸತ್ಯಾಗ್ರಹವನ್ನು ಉದ್ದೇಶಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿ.ಜೆ,ಪಿ ಅಧ್ಯಕ್ಷ ವೆಂಕಟ್ ವಳಂಬೆ ಮಾತನಾಡಿ ಆರ್.ಎಸ್.ಎಸ್ ಕಾರ್ಯರ್ತ ಶರತ್‌ನನ್ನು ಕೊಲೆ ಮಾಡಿ ಒಂದು ಕಳೆದು ಹೋಗಿದೆ ಆದರೂ ಈತನಕ ಆರೋಪಿಗಳನ್ನು ಬಂಧಿಸಿಲ್ಲ.ನಾವು ಇವತ್ತು ಇಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದದ್ದೇವೆ. ಸಂಜೆ ನಾಲ್ಕು ಗಂಟೆಯ ತನಕ ಧರಣಿ ಸತ್ಯಾಗ್ರಹ ನಡೆಯಲಿದ್ದು ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಿದ್ದೇವೆ. ಮುಂದೆಯೂ ಶರತ್ ಮಡಿವಾಳರ ಕೊಲೆ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ.
ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್ ಮನ್ಮಥ,ನಗರ ಪಂಚಾಯತ್ ಸದಸ್ಯ ಪ್ರಕಾಶ್ ಹೆಗ್ಡೆ,ಕಿರಣ್,ಗಿರೀಶ್ ಕಲ್ಲಗದ್ದೆ,ಸುಳ್ಯ ಸಿ.ಎ ಬ್ಯಾಂಕ್ ಅಧ್ಯಕ್ಷ ಸುಬೋದ್ ಶೆಟ್ಟಿ ಇತರರು ಉಪಸ್ಥಿತರಿದ್ದರು.

ವರದಿ: ತೇಜೇಶ್ವರ್ ತೊಡಿಕಾನ

Related posts

Leave a Reply