Header Ads
Header Ads
Breaking News

ಶರವು ಶ್ರೀ ಮಹಾಗಣಪತಿ ದೇವರ 150ನೇ ವರ್ಷದ ದೀಪಾರಾಧನೆ ಉತ್ಸವ : ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಗುರ್ಜಿ ಸಂಭ್ರಮ

ಮಂಗಳೂರಿನ ಶರವೂ ಶ್ರೀ ಮಹಾಗಣಪತಿ ದೇವರ ೧೫೦ನೇ ವರ್ಷದ ದೀಪಾರಾಧನೆ ಉತ್ಸವ ದ ಮಣ್ಣಗುಡ್ಡೆ ಗುರ್ಜಿ ಸಂಭ್ರಮದಿಂದ ನಡೆಯಿತು. ಮಹಾಗಣಪತಿ ದೇವರು ಪ್ರತಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ದ್ವಾದಶಿಯಂದು ಸಂಧ್ಯಾ ಕಾಲದ ಅನಂತರ ಮಣ್ಣಗುಡ್ಡೆಗೆ ಪೇಟೆ ಸವಾರಿಯಲ್ಲಿಬಂದು ಪೂಜೆ ಸ್ವೀಕರಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಅದರಂತೆ ದೇವರ ಪೇಟೆ ಸವಾರಿ ರವಿವಾರ ಸಾಯಂಕಾಲ ದೇವಳದಿಂದ ಹೊರಟು ಕೆ.ಎಸ್.ರಾವ್ ರಸ್ತೆ, ನವಭಾರತ್ ವೃತ್ತ, ಪಿವಿಎಸ್ , ಡೊಂಗರಕೇರಿ, ಮಣ್ಣಗುಡ್ಡ, ಬಲ್ಲಾಳ್ಭಾಗ್, ಅಳಕೆ, ನ್ಯೂಚಿತ್ರಾ , ಕಾಳಿಕಾಂಬ ರಸ್ತೆಯಾಗಿ ಕಾರ್ ಸ್ಟೀಟ್ ಮೂಲಕ ದೇವಳಕ್ಕೆ ಹಿಂತಿರುಗಿತು. ಇನ್ನು ಭಜನಾ ಕಾರ್ಯಕ್ರಮಕ್ಕೆ ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆ ಡಾ|ಅನುಪಮಾ ಸುರೇಶ್ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಕೆ.ಶ್ರೀಪತಿ ಭಟ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಶ್ರೀ ಮಹಾಗಣಪತಿ ದೇವರನ್ನ ಬ್ಯಾಂಡ್ – ವಾಲಗ ಮೆರವಣಿಗೆ ಜೊತೆ ಮಣ್ಣಗುಡ್ಡೆಗೆ ಕರೆತಂದು. ಸರ್ವಾಲಂಕೃತ ಗುರ್ಜಿಯ ರಹಿತ ಪೀಠದಲ್ಲಿ ಕುಳ್ಳಿರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ 12ಕ್ಕೆ ಮಹಾ ಪೂಜೆಯೊಂದಿಗೆ ಪ್ರಸಾದ ವಿತರಣೆ ನೆರವೇರಿತು. ಗುರ್ಜಿ ಸೇವಾ ಸಮಿತಿ ಅಧ್ಯಕ್ಷ ವೈ.ರಮೇಶ್ ಭಟ್ , ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಉಪಾಧ್ಯಕ್ಷ ರಮಾನಂದ ಪಾಂಗಾಳ್, ಕಾರ್ಯದರ್ಶಿ ಪಿ.ಭಾರ್ಗವ ತಂತ್ರಿ, ಜತೆ ಕಾರ್ಯದರ್ಶಿ ಗುರುಚರಣ್ ಎಚ್.ಆರ್., ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿಯ ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ , ಮಾಧ್ಯಮ ವಕ್ತಾರ ನಂದಕುಮಾರ್ ಕೆ., ಮಹಿಳಾ ಘಟಕದ ಕಾರ್ಯದರ್ಶಿ ಮನೋರಮ ಉಮೇಶನ್ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *