Header Ads
Header Ads
Breaking News

ಶಸ್ತ್ರಚಿಕಿತ್ಸೆಗೆ ಬಂದ ರೋಗಿ ಮೃತ್ಯು

ಕುಂದಾಪುರ: ಹರ್ನಿಯಾ ಶಸ್ತ್ರಚಿಕಿತ್ಸೆಗೆಂದು ಬಂದವರು ಶಸ್ತ್ರಚಿಕಿತ್ಸೆ ನಡೆದ ೮ ಗಂಟೆಯೊಳಗೆ ಮೃತಪಟ್ಟ ಹಿನ್ನೆಲೆ, ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ವೈದ್ಯರನ್ನ ತರಾಟೆಗೆ ತೆಗೆದುಕೊಂಡ ಘಟನೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ತಾಲೂಕಿನ ಹೊಸಾಡು ನಿವಾಸಿ ಸಂಜೀವ ಎನ್ನುವವರು ನಗರದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆಗೆಂದು ಸೋಮವಾರ ದಾಖಲಾಗಿದ್ದರು. ಮಂಗಳವಾರ ಮಧ್ಯಾಹ್ನ ಶಸ್ತ್ರಚಿಕಿತ್ಸೆಯನ್ನು ಕೂಡ ವೈದ್ಯರು ನಡೆಸಿದ್ದರು. ಶಸ್ತ್ರಚಿಕಿತ್ಸೆ ನಡೆದ ಬಳಿಕ ಆರೋಗ್ಯವಾಗಿದ್ದ ಸಂಜೀವ ಹೊಸಾಡು ಸಂಜೆ ವೇಳೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿ ಉಸಿರಾಟದ ಸಮಸ್ಯೆಯನ್ನ ಎದುರಿಸಿದ್ದು, ಈ ಸಂದರ್ಭ ವೈದ್ಯರುಗಳು ಚಿಕಿತ್ಸೆಯನ್ನು ಕೂಡ ನೀಡಿದ್ದಾರೆ. ಆದರೆ ಸಂಜೆ ವೇಳೆ ಚಿಕಿತ್ಸೆ ವೈಫಲ್ಯದಿಂದ ಸಂಜೀವ ಹೊಸಾಡು ಮೃತಪಟ್ಟಿದ್ದಾರೆ. ಈ ವಿಚಾರ ತಿಳಿದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮತ್ತು ಆಸ್ಪತ್ರೆಯ ವಿರುದ್ಧ ದೂರುದಾಖಲಿಸಿದ್ದಾರೆ.
ಕುಟುಂಬಸ್ಥರಿಂದ ವೈದ್ಯರಿಗೆ ತರಾಟೆ.
ಮೃತ ಸಂಜೀವ ಹೊಸಾಡು ಕಾರ್ಮಿಕ ಸಂಘಟನೆ ಮತ್ತು ಇತರ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಜನಾನುರಾಗಿಯಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಆರಾಮವಾಗಿ ಮಾತನಾಡಿರುವ ಅವರು ಸಂಜೆ ವೇಳೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವನ್ನಪ್ಪುತ್ತಾರೆ ಎಂದರೆ, ಆಘಾತಕಾರಿ, ಇದು ಆಸ್ಪತ್ರೆಯವರ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿಗಳನ್ನ ವೈದ್ಯರನ್ನ ತರಾಟೆಗೆ ತೆಗೆದುಕೊಂಡರು. ನಂತರ ಕುಂದಾಪುರ ಠಾಣಾಧಿಕಾರಿ ಅವರನ್ನ ಸಮಾಧಾನಪಡಿಸಿ,. ಮೃತರ ಮರಣೋತ್ತರ ಪರೀಕ್ಷೆಗೆಂದು ಕೆಎಂಸಿ ಮಣಿಪಾಲಕ್ಕೆ ಕಳುಹಿಸಿದ್ರು.
ಬಿಗಿ ಬಂಧೋಬಸ್ತ್
ಸಂಜೀವ ಸಾವಿನ ಹಿನ್ನೆಲೆ ಕುಂದಾಪುರದ ಕಾರ್ಮಿಕ ಸಂಘಟನೆಗಳಲ್ಲಿ ಆಸ್ಪತ್ರೆಯ ವಿರುದ್ಧ ಆಕ್ರೋಶವಿತ್ತು. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಸಮೀಪ ಬಿಗು ಪೊಲೀಸ್ ಬಂದೋಭಸ್ತ್ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾಪಾಸು ತರುವ ವೇಳೆ ಅಹಿತಕರ ಘಟನೆ ನಡೆಯುವ ಕುರಿತು ಗುಪ್ತಚರ ಇಲಾಖೆಯ ಮಾಹಿತಿ ಇದ್ದ ಹಿನ್ನೆಲೆ ಪೊಲೀಸರು ಬಿಗು ಬಂದೋಭಸ್‌ಗೆ ಕ್ರಮ ಕೈಗೊಂಡಿದ್ದರು.
ವಿಫಲಗೊಂಡ ಗಲಭೆ ಯತ್ನ
ಮರಣೋತ್ತರ ಪರಿಕ್ಷೆ ಬಳಿಕ ಸಂಜೀವರ ಮೃತದೇಹವನ್ನು ಮೆರವಣಿಗೆ ಮೂಲಕ ಕುಂದಾಪುರ ನಗರದ ಮುಖ್ಯರಸ್ತೆಯಲ್ಲಿ ಮೆರವಣೆಗೆ ಮಾಡಲಾಯಿತು. ಘಟನೆ ನಡೆದ ಖಾಸಗಿ ಆಸ್ಪತ್ರೆ ಕುಂದಾಪುರದ ಮುಖ್ಯರಸ್ತೆಯಲ್ಲಿಯೇ ಇದ್ದ ಕಾರಣ ಘಟನೆಯ ಆಸ್ಪತ್ರೆಗೆ ಬಿಗು ಪೊಲೀಸ್ ಭದ್ರತೆಯನ್ನು ಪೊಲೀಸರು ನೀಡಿದ್ದರು. ಮೆರವಣಿಗೆ ಆಸ್ಪತ್ರೆ ಸಮೀಪಿಸುತ್ತಿದ್ದಂತೆ ಮೆರವಣಿಗೆ ನಿಧಾನಗತಿಯನ್ನ ಪಡೆಯಲಾರಂಬಿಸಿತು. ಇದನ್ನು ಕಂಡ ಕುಂದಾಪುರ ಠಾಣಾಧಿಕಾರಿ ಸ್ಥಳದಲ್ಲಿ ಅಹಿತಕರ ಘಟನೆಗೆ ಕಾರಣವಾಗಬಹುದೆಂಬ ಶಂಕೆ ಹಿನ್ನೆಲೆ, ಮೆರವಣಿಗೆಗೆ ವೇಗ ನೀಡಿ ಅಲ್ಲಿಂದ ಸಾಗಹಾಕಿದರು. ಇದರಿಂದ ಸಂಘಟನೆಗಳ ಯತ್ನ ವಿಫಲಗೊಂಡತಾಗಿದೆ.
ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply