Header Ads
Header Ads
Breaking News

ಶಾಂತಿಮೊಗರು ಸೇತುವೆ ಕನಸು ನನಸು, ಬೇಗ ಬಸ್ ಬಿಡಲು ಸ್ಥಳೀಯರ ಒತ್ತಾಯ

ಶಾಂತಿಮೊಗರುವಿನಲ್ಲಿ ಸೇತುವೆ ನಿರ್ಮಾಣದೊಂದಿಗೆ ಸ್ಥಳೀಯರ ಹಲವು ದಶಕಗಳ ಕನಸು ನನಸಾಗಿದ್ದು, ಈ ಮಾರ್ಗವಾಗಿ ಬಸ್ ಸಂಚಾರದ ಕನಸೊಂದು ಬಾಕಿ ಇದೆ.
ಈ ಮಾರ್ಗವಾಗಿ ಬಸ್ ಸೌಲಭ್ಯ ಒದಗಿಸುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿವಿಧೆಡೆ ತೆರಳಲು ಸಾಕಷ್ಟು ಸಮಯ ಮತ್ತು ಹಣ ಉಳಿತಾಯವಾಗಲಿದೆ. ಆಲಂಕಾರು ಭಾಗದ ಜನತೆಗೆ ಪುತ್ತೂರು ತಲುಪಬೇಕಾದರೆ ಉಪ್ಪಿನಂಗಡಿ ಮೂಲಕ ಹೋಗಬೇಕಾದ ಅನಿವಾರ್ಯ ಇತ್ತು. ಇಲ್ಲಿಂದ ಪುತ್ತೂರಿಗೆ ೨೮ ಕಿ. ಮೀ. ಮತ್ತು ಆಲಂಕಾರಿನಿಂದ ಶಾಂತಿಮೊಗರು ಸವಣೂರು ಮಾರ್ಗವಾಗಿ ತೆರಳಲು ೨೪ ಕಿ. ಮೀ. ದೂರವಿದೆ. ಈ ಸೇತುವೆಯಿಂದ ಸುಮಾರು ೪ ಕಿ. ಮೀ. ದೂರ ಕಡಿಮೆಯಾಗಲಿದೆ.
ಬೆಳ್ಳಾರೆಯಿಂದ ಸವಣೂರು ಶಾಂತಿ ಮೊಗರು ಮಾರ್ಗವಾಗಿ ಆಲಂಕಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಪಾಲ್ತಾಡಿ, ಪುಣಪ್ಪಾಡಿ, ಸವಣೂರು, ಬೆಳಂದೂರು ಭಾಗದ ಜನತೆಗೆ ಹೋಬಳಿ ಕೇಂದ್ರವಾದ ಕಡಬಕ್ಕೆ ಆಲಂಕಾರು ಮಾರ್ಗವಾಗಿ ತೆರಳುವುದು ಸುಲಭವಾಗಲಿದೆ. ಇಲ್ಲದಿದ್ದರೆ ಈಗಿರುವಂತೆಯೇ ಸವಣೂರು, ಕಾಣಿಯೂರಿನಿಂದ ಪಂಜಕ್ಕೆ ತೆರಳಿ ಅಲ್ಲಿ ಬೇರೆ ಬಸ್ ಹಿಡಿದು ಕಡಬಕ್ಕೆ ಹೋಗಬೇಕು. ಪಾಲ್ತಾಡಿ ಗ್ರಾಮದವರು ಮಾಡಾವು ಬೆಳ್ಳಾರೆ ಮಾರ್ಗದ ಮೂಲಕ ಪಂಜಕ್ಕೆ ತೆರಳಿ ಬೇರೆ ವಾಹನದಲ್ಲಿ ಕಡಬಕ್ಕೆ ಹೋಗುತ್ತಿದ್ದಾರೆ. ಹೊಸ ಬಸ್ ಸೇವೆ ಆರಂಭವಾದರೆ ಈ ಸಂಕಷ್ಟ ಬಗೆಹರಿಯಲಿದೆ.

Related posts

Leave a Reply