Header Ads
Header Ads
Breaking News

ಶಾರದಾ ಸಮೂಹ ಸಂಸ್ಥೆಗೆ ಆರ್ಯುವೇದ ಆಸ್ಪತ್ರೆ, ಕಾಲೇಜು ಸೇರ್ಪಡೆ.ಪ್ರೊ. ಎಂ.ಬಿ. ಪುರಾಣಿಕ್ ಮಾಹಿತಿ

ಶಾರದಾ ಸಮೂಹ ಸಂಸ್ಥೆಗೆ ಆರ್ಯುವೇದ ಆಸ್ಪತ್ರೆ, ಕಾಲೇಜು ಸೇರ್ಪಡೆಮಂಗಳೂರಿನಲ್ಲಿ ಪ್ರೊ. ಎಂ.ಬಿ. ಪುರಾಣಿಕ್ ಮಾಹಿತಿಮಂಗಳೂರು, ವಾಮಂಜೂರು ಮತ್ತು ತಲಪಾಡಿಯಲ್ಲಿ ವಿವಿಧ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದು, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಹೆಸರಿನಲ್ಲಿ ಶಿಕ್ಷಣವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಅದರ ಜೊತೆಗೆ ಇದೀಗ ಶಾರದಾ ಆಯುರ್ವೇದ ಆಸ್ಪತ್ರೆ ಮುಂದಿನ ದಿನಗಳಲ್ಲಿ ಶಾರದಾ ಆಯುರ್ವೇದ ಕಾಲೇಜು ಸೇರಿಕೊಳ್ಳಲಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ ತಿಳಿಸಿದರು.

ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಷ್ಠಿತ ಸಂಸ್ಥೆಯಾಗಿ 100 ಹಾಸಿಗೆಯನ್ನೊಳಗೊಂಡ, ಸರ್ವ ಚಿಕಿತ್ಸೆಯನ್ನು ಕೊಡಬಹುದಾದ ಶಾರದಾ ಆರ್ಯುವೇದ ಆಸ್ಪತ್ರೆ ಜುಲೈ 1ರಂದು ಕೇಂದ್ರದ ಆಯುಷ್ ಮಂತ್ರಿ ಶ್ರೀಪಾದ ನಾಯ್ಕ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಶಾರದಾ ಸಮೂಹ ಸಂಸ್ಥೆಯ ದಯಾನಂದ ಕಟೀಲ್ ಮತ್ತು ಪ್ರಶಾಂತ್ ಉಪಾಧ್ಯಾಯ ಉಪಸ್ಥಿತರಿದ್ದರು.

Related posts

Leave a Reply