Breaking News

ಶಾಲಾ ಮಕ್ಕಳಿಗೆ ಅಕ್ಕಿ ಬಗೆಗಿನ ಪಾಠ, ನೆರಿಮೊಗರು ಶಾಲಾ ಮಕ್ಕಳಿಂದ ನಾಟಿ


ಇಂದು ಮಕ್ಕಳಿಗೆ ಬರಿಯ ಪುಸ್ತಕದ ಪಾಠ ಮಾತ್ರವೇ ಎಲ್ಲೆಡೆ ಸಿಗುತ್ತಿದೆ. ಆದರೆ ಈ ಶಾಲೆ ಢಿಪರೆಂಟ್. ಪ್ರತೀ ಮಗುವಿಗೂ ಮಣ್ಣಿನ ಪಾಠ ಬೇಕೆಂಬ ಕಾರಣದಿಂದ ಶಾಲೆಯ ಮಕ್ಕಳೆಲ್ಲಾ ಒಂದು ದಿನ ಗದ್ದೆಗೆ ಇಳಿದಿದ್ದಾರೆ. ಇಡೀ ದಿನ ಸಂಭ್ರಮ ಪಟ್ಟರು. ಈ ಸ್ಟೋರಿ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆರಿಮೊಗರಿನಲ್ಲಿರುವ ಸರಸ್ವತಿ ವಿದ್ಯಾ ಮಂದಿರ ಮತ್ತು ಶಿಶು ಮಂದಿರದ ವತಿಯಿಂದ ಭತ್ತದ ನಾಟಿ ಮಾಡುವುದನ್ನು ೫ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ ಅವಿನಾಶ್ ಕೊಡಂಕಿರಿಯವರ ನೇತೃತ್ವದಲ್ಲಿ ಭತ್ತದ ನಾಟಿ ಪ್ರಾತ್ಯಕ್ಷಿಕೆ ನಡೆಸಿದರು. ಸರಸ್ವತಿ ವಿದ್ಯಾಮಂದಿರವು ಕಿರಿಯ ಪ್ರಾಥಮಿಕ ಶಾಲೆಯಾಗಿದ್ದು ೨೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದು ಈ ವಿದ್ಯಾ ಸಂಸ್ಥೆಯು ಪಠ್ಯದ ಜತೆಗೆ ಪಠ್ಯೇತರ ಶಿಕ್ಷಣ ನೀಡುತ್ತಾ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಈ ಸಂಸ್ಥೆಯ ಗುರಿ.
ಶಿಕ್ಷಕರಾದ ಅವಿನಾಶ್ ಕೊಡಂಕಿರಿಯವರ ನೇತೃತ್ವದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ರಮೇಶ್ ಜೋಗಿ ಮುಗೆರಡ್ಕ ಇವರ ಹೊಲದಲ್ಲಿ ಸುರಿಯುವ ಮಳೆಯಲ್ಲಿ ನೇಜಿ ನಾಟಿ ಮಾಡಿ ಭತ್ತದ ಕೃಷಿಯ ಪ್ರಾತ್ಯಕ್ಷಿಕೆ ನಡೆಸಿದರು. ಇಂದು ಗದ್ದೆ ಮಾಯವಾಗುವ ಸಂದರ್ಭ ಮಕ್ಕಳಿಗೂ ಈ ಬಗ್ಗೆ ಅರಿವು ಇರುವುದಿಲ್ಲ. ಅಕ್ಕಿ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗೆ ಮಕ್ಕಳಿಗೆ ಪ್ರಾಕ್ಟಿಕಲ್ ಆದ ಮಾಹಿತಿ ಸಿಗುತ್ತದೆ. ಅದರ ಜೊತೆಗೆ ಕೃಷಿಯೂ ಒಂದು ಉದ್ಯೋಗ ಎಂಬ ಭಾವನೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಪ್ರಯತ್ನ ಯಶಸ್ಸು ಕಂಡಿತು.

Related posts

Leave a Reply