
ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ಸೊಂದು ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.
ಕೆವಿಜಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ಸು ಇಂದು ಮುಂಜಾನೆ ಶಾಲಾ ಮಕ್ಕಳನ್ನು ಕರೆತರಲು ತೆರಳುತ್ತಿದ್ದ ಸಂದರ್ಭ ಇದ್ದಕಿದ್ದಂತೆ ಹೊತ್ತಿ ಉರಿದಿದೆ, ಘಟನೆ ನಡೆದ ಸಂದರ್ಭ ಬಸ್ಸಿನಲ್ಲಿ ಮಕ್ಕಳು ಇರದ ಕಾರಣ ಯಾವುದೇ ದುರಂತ ಸಂಭವಿಸಲಿಲ್ಲ,ಬಸ್ಸಿಗೆ ಬೆಂಕಿ ಹೊತ್ತಿದ ಸಂದರ್ಭ ಬಸ್ ಚಾಲಕ ಸೇರಿ ಇಬ್ಬರು ಬಸ್ಸಿನಿಂದ ಜಿಗಿದಿದ್ದಾರೆ ಇದರಿಂದ ಬಸ್ಸು ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.