Header Ads
Breaking News

ಶಾಲಾ ಶಿಕ್ಷಕರಿಗೆ ಯೋಗ ತರಬೇತಿ ಕಾರ್ಯಕ್ರಮ : ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯೋಜನೆ

ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿಯಲ್ಲಿ ಮಂಗಳೂರಿನ ಕರ್ನಾಟಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದೊಂದಿಗೆ ಶಾಲಾ ಶಿಕ್ಷಕರಿಗೆ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಅಶೋಕನಗರದಲ್ಲಿರುವ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಶಾಲಾ ಶಿಕ್ಷಕರಿಗೆ ಯೋಗ ತರಬೇತಿಯನ್ನು ನೀಡಲಾಯಿತು. ಯೋಗ ಮಾಡುವುದರಿಂದ ಆರೋಗ್ಯಯುತ ಸಮಾಜವನ್ನು ಕಾಣಬಹುದು ಎಂಬ ಉದ್ದೇಶದಿಂದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಯೋಗ ತರಬೇತಿಯನ್ನು ಹಮ್ಮಿಕೊಂಡರು.
ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ. ಸಂಗೀತಲಕ್ಷ್ಮೀ ಅವರು ತರಬೇತಿಯನ್ನು ನೀಡಿದರು. ಬಳಿಕ ಮಾನಸಿಕ ಆರೋಗ್ಯ ಒತ್ತಡ ಮತ್ತು ಏಕಾಗ್ರತೆಗಾಗಿ ಯೋಗ ಎಂಬ ಬಗ್ಗೆ ಮಾಹಿತಿಯನ್ನು ಶಿಕ್ಷಕರಿಗೆ ನೀಡಿದರು. ಯೋಗ ತರಬೇತಿಯಲ್ಲಿ ಮಂಗಳೂರು ವಿವಿಧ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *