Header Ads
Header Ads
Breaking News

ಶಾಲೆಯ ಆವರಣ ಗೋಡೆ ಕೆಡವಿ ರಸ್ತೆ ನಿರ್ಮಾಣ: ವಿವಾದವನ್ನು ಸೃಷ್ಟಿಸಿದ ರಸ್ತೆ

ಮಂಜೇಶ್ವರದ ಮೀಂಜ ಗ್ರಾ.ಪಂ. ವ್ಯಾಪ್ತಿಯ ಮೂಡಂಬೈಲು ಸರಕಾರಿ ಶಾಲೆಯ ಆವರಣಗೋಡೆ ಕೆಡವಿ ಮೈದಾನ ಸಮೀಪ ವಾಸಿಗಳಾದ ಮೂವರು ತಮ್ಮ ಮನೆಗೆ ರಸ್ತೆ ನಿರ್ಮಿಸಿರುವುದು ವಿವಾದಕ್ಕೆಡೆಯಾಗಿದೆ. ಈ ಬಗ್ಗೆ ಊರವರು ಸಂಬಂಧಪಟ್ಟವರಿಗೆ ದೂರುಗಳನ್ನು ನೀಡಿದ್ದಾರೆ.

ಜೊತೆಯಾಗಿ ಸ್ಥಳೀಯರ ವ್ಯಾಪಕ ಪ್ರತಿಭಟನೆಗೂ ಕಾರಣವಾಗಿದೆ.ಕಳೆದ ಎರಡು ವಾರಗಳ ಹಿಂದೆ ಮೈದಾನಕ್ಕಿದ್ದ ಆವರಣ ಗೋಡೆಯನ್ನು7 ಪೀಟ್ ಗಳಷ್ಟು ಕೆಡವಿ ಗುಡ್ಡೆ ಕೊರೆದು ಮಣ್ಣುತರಿಸಿ ಮೈದಾನದ ಸಮೀಪ ರಸ್ತೆ ನಿರ್ಮಿಸಲಾಗಿದೆ. ಈ ಬಗ್ಗೆ ಗಮನಕ್ಕೆ ಬಂದ ತಕ್ಷಣವೇ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾರೂ ಕ್ರಮಕೈಗೊಂಡಿರಲಿಲ್ಲ. ಇದೀಗ ಸೋಮವಾರ ಸುರಿದ ಭಾರೀ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಹೋಗಿದ್ದು,ಮಣ್ಣು ಶಾಲಾ ಬಾವಿಗೆ ಸೇರಿಕೊಂಡಿದೆ. ಇದರಿಂದ ಮಂಗಳವಾರ ಶಾಲಾ ಮಕ್ಕಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಕಂಡುಬಂತು.ಇದೆಲ್ಲಾ ನಡೆದು ಹಲವು ದಿನಗಳ ಬಳಿಕ ಶಾಲಾ ರಕ್ಷಕ ಶಿಕ್ಷಕ ಸಂಘ ಎಚ್ಚೆದಿದ್ದು ಈ ಬಗ್ಗೆ ಸ್ಥಳೀಯರಾದ ಮೂವರ ವಿರುದ್ದ ರಾಜ್ಯ ಶಿಕ್ಷಣ ಸಚಿವ, ಶಿಕ್ಷಣ ನಿರ್ದೇಶಕರು, ಜಿಲ್ಲಾ ಪಂಚಾಯತಿ ಹಾಗೂ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.ಇದರಿಂದ ಅಧಿಕೃತರು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಲಾ ರಕ್ಷಕ ಶಿಕ್ಷಕ ಸಂಘ ಆಗ್ರಹಿಸಿದೆ.

Related posts

Leave a Reply