Header Ads
Header Ads
Breaking News

ಶಾಸಕ ಅಂಗಾರರಿಂದ ತಾರತಮ್ಯವಿಲ್ಲದೇ ಎಲ್ಲಾ ಗ್ರಾಮಗಳ ಅಭಿವೃದ್ದಿ ಅಭಿವೃದ್ದಿ ಕೆಲಸವೇ 5 ಬಾರಿ ಶಾಸಕರ ಗೆಲುವಿಗೆ ಕಾರಣ ಅರಂತೋಡು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಹೇಳಿಕೆ

ಸುಳ್ಯ ವಿಧಾನಸಭಾ ಕ್ಷೇತ್ರದ 7 ಜಿಲ್ಲಾ ಪಂಚಾಯತ್ ಕ್ಷೇತ್ರ ಮತ್ತು ನಗರಕ್ಕೆ ಯಾವುದೇ ತಾರತಮ್ಯವಿಲ್ಲದೇ ಅನುದಾನ ನೀಡಿ ಗ್ರಾಮಗಳ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಶಾಸಕರು ನಿರಂತರವಾಗಿ ಕ್ರೀಯಾಶೀಲವಾಗಿ ಅಭಿವೃದ್ದಿ ಕೆಲಸಗಳೇ ಶಾಸಕ ಅಂಗಾರರನ್ನು 5ನೇ ಬಾರಿ ಗೆಲ್ಲಿಸಿದ್ದಾರೆ. ಇದೆ ಗೆಲುವು ಮುಂದಿನ ಚುನಾವಣೆಯಲ್ಲಿ ಪುನರ್‌ವರ್ತನೆ ಆಗಲಿದೆ ಎಂದು ಅರಂತೋಡು ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು.ಅವರು ಸುಳ್ಯದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಅವರು, ಸುಳ್ಯ ತಾಲೂಕಿನ ಗ್ರಾಮೀಣ ರಸ್ತೆಗಳ ಅಭಿವೃದ್ದಿ, ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ನಿರ್ವಹಿಸಿದ ಕಾರಣ ಶಾಸಕರನ್ನು 5 ಬಾರಿ ಜನರು ಗೆಲ್ಲಿಸಿಕೊಟ್ಟಿದ್ದಾರೆ. ಸುಳ್ಯದ ಚುನಾವಣೆ ಅಭಿವೃದ್ದಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಅವರ ಹೇಳಿಗೆಗೆ ಸ್ವಾಗತ. ಸುಳ್ಯದಲ್ಲಿ ಬಿಜೆಪಿ ಶಾಸಕರ ಅಭಿವೃದ್ದಿ ಕೆಲಸ ಮತ್ತು ಕಾಂಗ್ರೆಸ್ ನಾಯಕರ ಅಪಪ್ರಚಾರದ ನಡುವಿನ ಚುನಾವಣೆ ಆಗಲಿದೆ ಎಂದು ತಿಳಿಸಿದರು.