Header Ads
Breaking News

ಸಾನಿಧ್ಯ ವಿಶೇಷ ಚೇತನ ಶಾಲಾ ಮಕ್ಕಳೊಂದಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್‌ರ 42ನೇ ಹುಟ್ಟುಹಬ್ಬದ ಆಚರಣೆ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ್ ಕಾಮತ್‌ರವರ 42ನೇ ಹುಟ್ಟು ಹಬ್ಬವನ್ನು ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಚೇತನ ಶಾಲಾ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಂಗಳೂರು ದಕ್ಷಿಣದ ಶಾಸಕರಾದ ಡಿ.ವೇದವ್ಯಾಸ್ ಕಾಮತ್‌ರವರು ಇಂದು ತನ್ನ 42ನೇ ಹುಟ್ಟು ಹಬ್ಬವನ್ನು ಸಾನಿಧ್ಯ ವಿಶೇಷ ಚೇತನ ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಅವರೊಂದಿಗೆ ಕೆಲ ಸಮಯವನ್ನು ಕಳೆದು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭ ಅವರು ಮಾತನಾಡಿ ಈ ಮಕ್ಕಳೊಂದಿಗೆ ಬೆರೆತು ಅವರೊಂದಿಗೆ ಸಮಯವನ್ನು ಕಳೆದು ಹುಟ್ಟುಹಬ್ಬವನ್ನು ಆಚರಿಸಿರುವುದು ನನಗೆ ತಂಬಾ ಖುಷಿಕೊಟ್ಟಿದೆ. ಸಾನಿಧ್ಯ ಮಕ್ಕಳು ದೇವರ ಮಕ್ಕಳು ಅವರ ಪ್ರಾರ್ಥನೆಯು ಕೂಡ ದೇವರಿಗೆ ಬೇಗ ಮುಟ್ಟುತ್ತದೆ ಎಂದು ತನ್ನ ಹುಟ್ಟುಹಬ್ಬದ ಸಂತೋಷವನ್ನು ಹಂಚಿಕೊಂಡರು.
ಇನ್ನೂ ಶಾಸಕರಿಗೆ ಸಾನಿಧ್ಯ ವಿಶೇಷ ಚೇತನ ಮಕ್ಕಳು ಎಂದರೆ ಅಚ್ಚುಮೆಚ್ಚು ತನ್ನ ಬಿಡುವಿನ ಸಮಯದಲ್ಲಿ ಕೂಡ ಅಲ್ಲಿಗೆ ತೆರಳಿ ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಇನ್ನು ತನ್ನ ಹುಟ್ಟುಹಬ್ಬವನ್ನು ಅದೇ ಮಕ್ಕಳೊಂದಿಗೆ ಆಚರಿಸಬೇಕು ಎಂದು ಇಂದು ಮುಂಜಾನೆ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಅವರೊಂದಿಗೆ ಕಾಲ ಕಳೆದರು. ತನ್ನ ಹುಟ್ಟು ಹಬ್ಬದ ಸುಂದರ ಕ್ಷಣವನ್ನು ಮಕ್ಕಳೊಂದಿಗೆ ಕಳೆದರು. ಮಕ್ಕಳು ತಮ್ಮದೇ ಆದ ರೀತಿಯಲ್ಲಿ ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದರು.

Related posts

Leave a Reply

Your email address will not be published. Required fields are marked *