Breaking News

ಶಾಸಕ ಮಂಕಾಳ ವೈದ್ಯರಿಂದ ಮುಖ್ಯಮಂತ್ರಿ ಪರಿಹಾರ ನಿಧಿ

ಹುಟ್ಟು ಅಂಗವಿಕಲೆಯಾದ ಭಟ್ಕಳ ತಾಲೂಕಿನ ಶಿರಾಲಿಯ ಸುಮಾರಿಯಾ ಯೂಸುಫ್ ಸಾಹೇಬ್‌ಗೆ ಶಾಸಕ ಮಂಕಾಳ ವೈದ್ಯ ಮುಖ್ಯಮಂತ್ರಿ ಪರಿಹಾರ ನಿಧಿಯ ಖs. ೨ ಲಕ್ಷ ಸಹಾಯಧನದ ಚೆಕ್‌ನ್ನು ನೀಡಿದರು.

ಹುಟ್ಟುವಾಗಲೇ ಎರಡೂ ಕಾಲನ್ನು ಕಳೆದುಕೊಂಡು ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದ ಸುಮಾರಿಯಾ ಈ ಸ್ಥಿತಿಯಲ್ಲೇ ಛಲದಿಂದ ಪದವಿಯನ್ನು ಪೂರೈಸಿದಳು. ಎಲ್ಲರಂತೆ ತಾನೂ ನಡೆದಾಡಬೇಕು ಎಂಬ ಮಹದಾಸೆಯಿಂದ ಕೃತಕ ಕಾಲುಗಳನ್ನು ಜೋಡಿಸಿಕೊಳ್ಳಲು ನಿರ್ಧರಿಸಿದಳು. ಆದರೆ ಕೃತಕ ಕಾಲಿಗೆ ಅಂದಾಜು ಖs.೪.೫೦ ಲಕ್ಷ ಬೇಕಾಗಿತ್ತು. ಈ ಸಂದರ್ಭದಲ್ಲಿ ಸುಮಾರಿಯಾ ಭಟ್ಕಳದ ಶಾಸಕ ಮಂಕಾಳ ವೈದ್ಯರಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡು ಹಣಕಾಸಿನ ನೆರವಿಗೆ ಮನವಿ ಮಾಡಿಕೊಂಡಳು. ಮನವಿಗೆ ಸ್ಪಂದಿಸಿದ ಶಾಸಕರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಖs. ೨ ಲಕ್ಷ, ವೈಯಕ್ತಿಕವಾಗಿ ಖs. ೫೦ ಸಾವಿರ, ಕೆ.ಡಿ.ಸಿ.ಸಿ. ಬ್ಯಾಂಕ್‌ನಿಂದ ಖs. ೧೦ಸಾವಿರ, ಜನತಾ ಕೋ ಆಪರೇಟಿವ್ ಬ್ಯಾಂಕ್‌ನಿಂದ ಖs.೧೦ಸಾವಿರ ಸಹಾಯಧನ ಒದಗಿಸಿದ್ದಾರೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply