Breaking News

ಶಾಸಕ ಮೊಯ್ದಿನ್ ಬಾವಾ ಹುಟ್ಟುಹಬ್ಬ, ಕೃಷ್ಣಾಪುರದಲ್ಲಿ 48 ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ


ಶಾಸಕ ಬಿ. ಎ. ಮೊಯ್ದಿನ್ ಬಾವಾ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ತಾವು ಪ್ರತಿನಿಧಿಸುತ್ತಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಶಾಲೆ ಕಾಲೇಜುಗಳ ಸುಮಾರು ೪೮,೦೦೦ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲು ನಿರ್ಧರಿಸಿದ್ದಾರೆ.
ತನ್ನ ವೈಯುಕ್ತಿಕ ಖರ್ಚಿನಿಂದ ಸುಮಾರು ೫೨ ಲಕ್ಷ ರೂ. ವೆಚ್ಚದ ಪುಸ್ತಕಗಳ ವಿತರಣೆ ಕಾರ್ಯಕ್ರಮಕ್ಕೆ ಚೊಕ್ಕಬೆಟ್ಟು ಕೃಷ್ಣಾಪುರದ ಎಂಜಿಎಂ ಹಾಲ್‌ನಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಮೊಯ್ದಿನ್ ಬಾವಾ, ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಬಶೀರ್ ಅಹಮದ್, ಕುಮಾರ್ ಮೆಂಡನ್, ಸದಾಶಿವ ಶೆಟ್ಟಿ ಮತ್ತಿತರರು ಹಾಜರಿದ್ದರು.

Related posts

Leave a Reply