Header Ads
Breaking News

ಶಾಸಕ ಯು.ಟಿ ಖಾದರ್ ಎಚ್ಚರಿಕೆ ಹಿನ್ನೆಲೆ : ಗಡಿಭಾಗದಲ್ಲಿ ಸಿಲುಕಿದ ಕಾರ್ಮಿಕರನ್ನು ಹುಟ್ಟೂರಿಗೆ ಕಳುಹಿಸಿದ ದ.ಕ ಜಿಲ್ಲಾಡಳಿತ

ಉಳ್ಳಾಲ : ಕೇರಳ ಗಡಿಭಾಗದಲ್ಲಿ ಸಿಲುಕಿದ 127 ಕಾರ್ಮಿಕರನ್ನು ಮಂಗಳವಾರ ತಡರಾತ್ರಿ ಐದು ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ಅವರ ಊರಿಗೆ ತಲುಪಿಸಲಾಗಿದೆ. ಶಾಸಕ ಯು.ಟಿ ಖಾದರ್ ಅವರು ನಿನ್ನೆ ಸಂಜೆ ತಲಪಾಡಿಗೆ ಭೇಟಿ ನೀಡಿದ್ದ ಸಂದರ್ಭ ಕಾರ್ಮಿಕರೆಲ್ಲರೂ ಊರಿಗೆ ತಲುಪಿಸುವಂತೆ ಅಲವತ್ತುಕೊಂಡಿದ್ದರು. ಈ ವೇಳೆ ಸಹಾಯಕ ಆಯುಕ್ತ ಹಾಗೂ ಜಿಲ್ಲಾಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಕೂಡಲೇ ಊರಿಗೆ ತಲುಪಿಸುವಂತೆ ಒತ್ತಾಯಿಸಿದ್ದರು.

ದಾವಣಗೆರೆ, ಹುಬ್ಬಳ್ಳಿ, ಗದಗ, ಕೊಪ್ಪಳ, ಬಳ್ಳಾರಿ, ಶಿವಮೊಗ್ಗ ನಿವಾಸಿ 127 ಕಾರ್ಮಿಕರನ್ನು ಐದು ಬಸ್ಸುಗಳಲ್ಲಿ ತಲಪಾಡಿಯಿಂದ ಕಳುಹಿಸಲಾಗಿದೆ. ಕೇರಳಕ್ಕೆ ಕೂಲಿಕಾರ್ಮಿಕರಾಗಿ ತೆರಳಿದ್ದ ಕಾರ್ಮಿಕರು ಲಾಕ್ ಡೌನ್ ನಿಂದ ಗಡಿಭಾಗ ಕುಂಜತ್ತೂರಿನ ಮರಿಯಾಶ್ರಮ ಶಾಲೆಯಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರಿಂದ ಮಾಹಿತಿ ಪಡೆದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ, ಅವರಿಂದ ಮಾಹಿತಿ ಪಡೆದಿದ್ದರು. ಅಲ್ಲದೆ ಕಾರ್ಮಿಕರನ್ನು ತಲುಪಿಸುವ ಪ್ರಯತ್ನ ಜಿಲ್ಲಾಡಳಿತ ಮಾಡದೇ ಇದ್ದಲ್ಲಿ, ತಾವೇ ಕಾನೂನು ಮುರಿದು ಗಡಿದಾಟಿಸುವ ಎಚ್ಚರಿಕೆಯನ್ನು ಯು.ಟಿ ಖಾದರ್ ನೀಡಿದ್ದರು.

ಇವರ ಆಗ್ರಹದಿಂದ ಎಚ್ಚೆತ್ತ ಜಿಲ್ಲಾಡಳಿತ ರಾತ್ರಿಯೊಳಗೆ ಎಲ್ಲಾ ಕಾರ್ಮಿಕರನ್ನು ಕಳುಹಿಸಿದ್ದಾರೆ. ಈ ವೇಳೆ ತಹಶೀಲ್ದಾರ್ ಗುರುಪ್ರಸಾದ್, ಸಹಾಯಕ ಆಯುಕ್ತ ಮದನ್ ಮೋಹನ್, ಕಂದಾಯ ನಿರೀಕ್ಷಕ ಸ್ಟೀಫನ್, ಗಡಿನಾಡು ರಕ್ಷಣಾ ವೇದಿಕೆ ಸಿದ್ದೀಖ್ ತಲಪಾಡಿ, ತಾ.ಪಂ ಸದಸ್ಯ ಸಿದ್ದೀಖ್ ತಲಪಾಡಿ, ತಲಪಾಡಿ ಪಂ. ಸದಸ್ಯರಾದ ವಿನಯ್ ಶೆಟ್ಟಿ, ವೈಭವ್ ಶೆಟ್ಟಿ, ಹಾಗೂ ಸಂತೋμï ಶೆಟ್ಟಿ ಉಪಸ್ಥಿತರಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply

Your email address will not be published. Required fields are marked *