Header Ads
Header Ads
Breaking News

ಶಾಸಕ ರಘುಪತಿಭಟ್ ಕರೆದಿದ್ದ ಸಭೆಗೆ ಅಧಿಕಾರಿಗಳ ಗೈರು: ಶಾಸಕ ರಘುಪತಿಭಟ್ ಗರಂ

ಉಡುಪಿ ನಗರದ ವಾರ್ಡ್ ನಲ್ಲಿ ಉದ್ಭವಿಸಿರುವಂತಹ ಅನೇಕ ಸಮಸ್ಯೆಗಳನ್ನು ತಿಳಿಯುವ ಉದ್ದೇಶದಿಂದ ಶಾಸಕ ರಘುಪತಿ ಭಟ್ ನಗರಸಭೆಯ ಪ್ರತಿನಿಧಿಗಳೊಂದಿಗೆ ಸಭೆಯನ್ನು ಕರೆದಿದ್ದರು ಆದರೆ ಸಭೆಗೆ ಕಮಿಷನರ್ ಸೇರಿದಂತೆ ಅಧಿಕಾರಿಗಳು ಗೈರುಹಾಜರಾದರು ಈ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ನಡುವಿನ ಶೀತಲ ಸಮರ ಬಹಿರಂಗಗೊಂಡಿದೆ

ನಗರ ಸಭೆ ಯಲ್ಲಿ ಇಂದು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಚುನಾಯಿತ ನಗರಸಭಾ ಜನ ಪ್ರತಿನಿಧಿಗಳ ಸಭೆಯನ್ನು ಕರೆದಿದ್ದರು. ಆದರೆ ಜಿಲ್ಲಾಧಿಕಾರಿಗಳು ಸಭೆಗೆ ಅಧಿಕಾರಿಗಳು ಭಾಗವಹಿಸಬಾರದು ಎಂದು ಆದೇಶವನ್ನು ನೀಡಿದರು. ಕಾರಣ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯದೆ ಇರುವುದರಿಂದ ಮತ್ತು ಸದಸ್ಯರು ಪ್ರಮಾಣ ವಚನ ಸ್ವೀಕರಿಸದೆ ಇರುವುದರಿಂದ ಅಧಿಕಾರಿಗಳು ಭಾಗವಹಿಸ ಬಾರದು ಎಂದು ಜಿಲ್ಲಾಧಿಕಾರಿಗಳು ಸಭೆಗೆ ಅಧಿಕಾರಿಗಳು ಹೋಗಬಾರದೆಂದು ಸೂಚನೆಯನ್ನ ನೀಡಿದ್ದರು.
ಮಾತ್ರವಲ್ಲದೆ ನಗರಸಭೆ ಅಧಿಕಾರಿಗಳು ಕೂಡ ನಗರಸಭೆಯಲ್ಲಿ ಸಭೆಯನ್ನು ನಡೆಸಿ ನಡೆಸಬೇಡಿ ಎಂದು ಶಾಸಕರಲ್ಲಿ ವಿನಂತಿ ಮಾಡಿಕೊಂಡಿದ್ದರು. ಆದರೆ ಉಡುಪಿ ನಗರಸಭಾ ವ್ಯಾಪ್ತಿಯ ಅನೇಕ ಸಮಸ್ಯೆಗಳ ಬಗ್ಗೆ ದೂರುಗಳು ಬರುವುದರಿಂದ ಈಗಾಗಲೇ ಎಲ್ಲ ನಗರಸಭಾ ಸದಸ್ಯರು ಸಭೆ ಯನ್ನು ಕರೆದು ಅದಕ್ಕೆ ಸೂಕ್ತ ವಾದಂತಹ ಕ್ರಮವನ್ನು ಅಧಿಕಾರಿಗಳೊಂದಿಗೆ ಕೊಡಿಸಬೇಕೆಂಬ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸುವುದಾಗಿ ಶಾಸಕ ರಘುಪತಿ ಭಟ್ ಇಂದು ಬೆಳಗ್ಗೆ 10.30 ಗಂಟೆಗೆ ಸಭೆಯನ್ನು ಕರೆದಿದ್ದರು. ಆದರೆ ಈ ಸಭೆಗೆ ಕಮಿಷನರ್ ಸೇರಿದಂತೆ ಯಾವುದೇ ಅಧಿಕಾರಿಗಳು ಭಾಗವಹಿಸಲಿಲ್ಲ. ಇದು ಶಾಸಕ ರಘುಪತಿ ಭಟ್ ಅವರ ಆಕ್ರೋಶಕ್ಕೆ ಕಾರಣವಾಯಿತು.

ಸಭೆಯಲ್ಲಿದ್ದ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ವಾರ್ಡ್ ನ ಸದಸ್ಯರು ಕೇಳಿದರು. ಆದರೆ ಕಮಿಷನರ್ ಬರ್ತೇನೆ ಅಂತ ಹೇಳಿ 12 ಗಂಟೆ ಕಾದರೂ ಕೂಡ ಕಮಿಷನರ್ ಸೇರಿದಂತೆ ಯಾವುದೇ ಅಧಿಕಾರಿಗಳು ಬರಲಿಲ್ಲ ಇದು ರಘುಪತಿ ಭಟ್ ಅವರನ್ನು ಮತ್ತಷ್ಟು ಕೆರಳಿಸಿತು. ಯಾವ ಕಾರಣಕ್ಕಾಗಿ ಬರಲಿಕ್ಕೆ ಆಗೋದಿಲ್ಲ ಎಂಬುದರ ಬಗ್ಗೆ ಲಿಖಿತವಾಗಿ ಬರೆದುಕೊಡುವಂತೆ ನಗರಸಭೆಯ ಮ್ಯಾನೇಜರ್ ಅವರಲ್ಲಿ ಶಾಸಕರು ಸೂಚಿಸಿದರು. ಮಾತ್ರವಲ್ಲದೇ ಜಿಲ್ಲಾಧಿಕಾರಿ ಸೂಚನೆಯನ್ನು, ಕ್ರಮವನ್ನು ಸದಸ್ಯರು ಖಂಡಿಸಿದರು.

ಈಗಾಗಲೇ ನೀರು ಸಹಿತ ಅನೇಕ ಸಮಸ್ಯೆಗಳು ಉಡುಪಿಯ ನಗರಸಭಾ ವ್ಯಾಪ್ತಿಯಲ್ಲಿ ಉದ್ಭವಿಸಿದ್ದು ಜನರು ನಮ್ಮನ್ನು ದೂರುತ್ತಿದ್ದಾರೆ ಆದ್ದರಿಂದ ಸಭೆಯನ್ನು ಕರೆದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ಸಭೆಯನ್ನು ಕರೆಯಬೇಕೆಂದು ಶಾಸಕರಲ್ಲಿ ವಿನಂತಿಸಿಕೊಂಡಿದ್ದೇವು ಆದರೆ ಎಂದು ಅಧಿಕಾರಿಗಳು ಇರದ ಕಾರಣ ಜನರು ಸಮಸ್ಯೆಗಳನ್ನುನಾವು ಯಾರಲ್ಲಿ ಹೇಳಿಕೊಳ್ಳೋದು ಅಂತ ಸದದ್ಯರು ಜಿಲ್ಲಾಧಿಕಾರುಗಳ ಕ್ರಮವನ್ನು ಖಂಡಿಸಿದರು. ಶಾಸಕ ರಘುಪತಿ ಭಟ್ ಕಮಿಷನರ್ ಬರಹೇಳುವಂತೆ ಹೇಳಿದರು. ಮದ್ಯಾಹ್ನ ಒಂದು ಗಂಟೆಗೆ ಬಂದ ಕಮಿಷನರ್ ಅವರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡರು. ಚುನಾಯಿತ ಸದಸ್ಯರೂ ಕೂಡಾ ಕಮಿಷನರ್ ಅವರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಸಭೆಯಲ್ಲಿ ಆಶ್ರಯ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನ ವಿತರಿಸಲಾಯಿತು.

Related posts

Leave a Reply