Header Ads
Header Ads
Breaking News

ಶಾಸಕ ರಾಮದಾಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ರಾಮದಾಸ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಳಿ ಇಂದು ಮುಂಜಾನೆ ಕಾರು ಅಪಘಾತವಾಗಿದೆ. ಕಾರಿನಲ್ಲಿ ರಾಮದಾಸ್ ಹಾಗೂ ಅವರ ಸಹೋದರ ಪ್ರಯಾಣಿಸುತ್ತಿದ್ದರು ಚಾಲಕ ಕಾರು ಚಲಾಯಿಸುತ್ತಿದ್ದ. ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸುಳ್ಯದ ಕೆ.ಪಿ.ಚಂದ್ರಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *