Header Ads
Header Ads
Breaking News

ಶಿಕ್ಷಕರ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳುದೂರು ಆರೋಪ

ಸರಕಾರಿ ಪ್ರೌಢಶಾಲೆ ಮುನಿಯಾಲು ಇದರ ವತಿಯಿಂದ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಇವರ ವತಿಯಿಂದ ಶಾಲಾ ಶಿಕ್ಷಕರಾದ ಮಂಜುನಾಥ ಸುಧೀಂದ್ರ ಹಾಗೂ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶೇಧಿಶಯನರವರ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅವಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಹೆಬ್ರಿ ಠಾಣೆಯಲ್ಲಿ ಸುಳ್ಳು ಮೊಕದ್ದಮೆಯನ್ನು ನೀಡಿರುವ ಬಗ್ಗೆ ಮುನಿಯಾಲಿನಲ್ಲಿ ಮುನಿಯಾಲು ಪೇಟೆಯ ಅಂಗಡಿ ಮುಂಗಟ್ಟನ್ನು ಮುಚ್ಚಿ ಶಾಲಾ ವಿದ್ಯಾರ್ಥಿಗಳು ಶಾಲಾ ವಠಾರದಿಂದ ಮುನಿಯಾಲು ಪೇಟೆಯ ತನಕ ಬೃಹತ್ ಪ್ರತಿಭಟನೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಶ್ವೇತ ಮಾತನಾಡಿ ಈ ಘಟನೆ ಸತ್ಯಕ್ಕೆ ದೂರವಾದುದು. ಇದು ಯಾರದೋ ಕುಮ್ಮಕ್ಕಿನಿಂದ ಈ ಪ್ರಕರಣ ದಾಖಲಾಗಿದೆ. ಮಂಜುನಾಥ ಶಿಕ್ಷಕರಿಂದ ನಮ್ಮ ಶಾಲೆಗೆ 100% ಫಲಿತಾಂಶ ಬರಲಿಕ್ಕೆ ಅವರೇ ಕಾರಣ ಎಂದರು. ನಂತರ ಮಾತನಾಡಿದ ಈ ಶಾಲೆಯ ಹಳೆ ವಿದ್ಯಾರ್ಥಿ ಉದಯ ಕುಮಾರ್ ಶೆಟ್ಟಿ ಇಂತ ಘಟನೆ ಈ ಶಾಲೆಯಲ್ಲಿ ಆಗಬಾರದಿತ್ತು. ಮಕ್ಕಳನ್ನು ಸರಿ ದಾರಿಗೆ ತರಲು ಶಿಕ್ಷಕರು ಹಾಗೂ ಪೋಷಕರ ಜವಬ್ದಾರಿ ತುಂಬಾ ಇದೆ. ಇದರಿಂದಾಗಿ ಇಲ್ಲಿಯ ಶಾಲಾ ಉಪಾಧ್ಯಾಯರು ಮಾನಸಿಕವಾಗಿ ತುಂಬಾ ಕುಗ್ಗಿದ್ದಾರೆ. ಇನ್ನು ಮುಂದೆ ಗೌರವಾನ್ವಿತ ಶಾಲಾ ಶಿಕ್ಷಕರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡುವ ಪ್ರಕ್ರಿಯೆ ನಿಲ್ಲಬೇಕು. ಹಾಗೂ ಪ್ರಕರಣ ಹಿಂದೆ ಪಡೆಯಬೇಕು ಎಂದು ಅಗ್ರಹಿಸಿದರು.

ಉಪಸ್ಥಿತಿ : ಮುಕ್ಲುಪಾಡಿ ಸತೀಶ್ ಶೆಟ್ಟಿ. ದಿನೇಶ್ ಪೈ, ಸುಮಲತಾ ನಾಯಕ್, ಸುರೇಂದ್ರ ಶೆಟ್ಟಿ, ಡಾ| ಸುದರ್ಶನ್ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply