Header Ads
Header Ads
Header Ads
Breaking News

ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ವಿವಿಧ ಬೇಡಿಕೆ ಸೆ.೬ರಂದು ವಿಧಾನ ಸೌಧದ ಮುಂದೆ ಆಹೋರಾತ್ರಿ ಧರಣಿ ಮಂಗಳೂರಿನಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿಕೆ

ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಲ್ಲಾ ವಿಧಾನ ಪರಿಷತ್ ಸದಸ್ಯರು ವಿಧಾನ ಸೌಧದ ಮುಂದೆ ಸೆಪ್ಟಂಬರ್ ೬ರಂದು ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಶಿಕ್ಷಕರ ದಿನಾಚರಣೆಯ ಶುಭಾಶಯ ಸಲ್ಲಿಸಿದರು. ಇವತ್ತಿನ ದಿನಗಳಲ್ಲಿ ಶಿಕ್ಷಕರಲ್ಲಿ ಕಾಡುತ್ತಿರುವ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸೆಪ್ಟಂಬರ್ ೬ರಂದು ೧೩ ಮಂದಿ ಶಾಸಕರು ವಿಧಾನ ಸೌಧದ ಮುಂದೆ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳುತ್ತಿದ್ದೇವೆ. ಶಿಕ್ಷಕರಲ್ಲಿರುವ ಸಮಸ್ಯೆಯ ಬಗ್ಗೆ ಚಿಕ್ಕಚಿಕ್ಕ ಗುಂಪು ಮಾಡಿ ಧರಣಿ ನಡೆಸುವುದು ಬೇಡ ಎಂದು ಹೇಳಿದರು. ಅಲ್ಲದೆ ಈಗಾಗಲೇ ೩೨ ಅಂಶದ ಸಮಸ್ಯೆಗಳ ಪಟ್ಟಿಯನ್ನು ಸಿದ್ದಪಡಿಸಿದ್ದೇವೆ. ಆ ಪಟ್ಟಿಯಲ್ಲಿರುವ ಸಮಸ್ಯೆಗಳನ್ನು ನಾಳೆಯೇ ಪರಿಹರಿಸಿ ಎಂದು ಶಿಕ್ಷಣ ಸಚಿವರಿಗೂ ತಿಳಿಸಲಾಗಿದೆ ಎಂದು ಹೇಳಿದರು.
ವರದಿ: ಶರತ್

 

Related posts

Leave a Reply