Header Ads
Breaking News

ಶಿಕ್ಷಣದಿಂದ ಸಿಗುವ ಸಂಸ್ಕಾರ ಬದುಕಿಗೆ ಅಳವಡಿಸಿ : ಬಿಗ್‍ಬಾಸ್ ವಿನ್ನರ್ ಶೈನ್ ಶೆಟ್ಟಿ ಹೇಳಿಕೆ

ಶಾಲಾ ಕಾಲೇಜು ದಿನಗಳಲ್ಲಿ ನಡೆಸುವ ಸಾಂಸ್ಕøತಿಕ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳೆಸುತ್ತದೆ. ಪ್ರಕೃತಿ, ಸಾಮಾಜಿಕ ಕಾಳಜಿಯೊಂದಿಗೆ ಪ್ರತಿಭೆಯನ್ನು ವಿದ್ಯಾರ್ಥಿಗಳು ತಾವು ಭಾಗವಹಿಸುವ ಸ್ಪರ್ಧೆಗಳಲ್ಲಿ ಅನಾವರಣಗೊಳಿಸಿದಾಗ ಉತ್ತಮವಾದ ಪ್ರತಿಭೆ ಬೆಳಕಿಗೆ ಬರಲು ಸಾಧ್ಯ. ಶಿಕ್ಷಣದಿಂದ ಸಿಗುವ ಮೌಲ್ಯ, ಸಂಸ್ಕಾರವನ್ನು ವಿದ್ಯಾರ್ಥಿಗಳು ಮುಂದೆ ತಮ್ಮ ಬದುಕಿಗೂ ಅಳವಡಿಸಬೇಕು ಎಂದು ಬಿಗ್‍ಬಾಸ್ 7ನೇ ಆವೃತ್ತಿಯ ವಿಜೇತ ಶೈನ್ ಶೆಟ್ಟಿ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹ್ಯೂಮ್ಯಾನಿಟಿ ವಿಭಾಗದಿಂದ ಆಯೋಜಿಸಿದ್ದ ಓಶಿಯಾನಸ್ ಫೆಸ್ಟ್‍ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬೆಂಗಳೂರಿನ ಕೆ.ಎಸ್.ಸಿ.ಸಿ ಆಡಳಿತ ನಿರ್ದೇಶಕ ಎನ್.ರಾಮಕೃಷ್ಣ ಮಾತನಾಡಿ, ಮಾನವನ ಸ್ವಾರ್ಥಕ್ಕೆ ಪ್ರಕೃತಿಯೂ ಮಾಲಿನವಾಗುತ್ತಿದೆ. ಪ್ರಕೃತಿಯನ್ನು ಜತನದಿಂದ ಕಾಪಾಡಿಕೊಳ್ಳುವ ಜಾಗೃತಿ ಮಾತ್ರವಲ್ಲ, ಅದು ಅನುಷ್ಠಾನಕ್ಕೂ ಬರಬೇಕು ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ನಿಸರ್ಗವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೈಂಕರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

2018-2019 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಪಡೆದ ಆಳ್ವಾಸ್ ವಿದ್ಯಾರ್ಥಿನಿ ಸೋನಿಯ ಸಲಿ ಹಾಗೂ 2ನೇ ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೆಡ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

2018-2019 ಮಾನವಿಕ ಕಲಾವಿಭಾಗದ ವಾರ್ಷಿಕ ಚಟುವಟಿಕೆಗಳ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕಲಾ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಫ್ಯಾಕಲ್ಟಿ ಸಂಯೋಜಕಿ ಪೂರ್ಣಿಮಾ, ವನ್ಯಜೀವಿ ಛಾಯಾಗ್ರಹಕ ವ್ರಿಜುಲಾಲ್, ವಿದ್ಯಾರ್ಥಿ ಸಂಯೋಜಕ ಪ್ರಣವ್ ಶಿವಕುಮಾರ್, ತೇಜು ಆರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *