Header Ads
Breaking News

ಶಿಕ್ಷಣ ಸಂಸ್ಥೆಯಿಂದಲೇ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸವಾಗಬೇಕು : ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಹೇಳಿಕೆ

ಮಕ್ಕಳಿಗೆ ಶಿಕ್ಷಣ ಸಂಸ್ಥೆಯಿಂದಲೇ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಬಾಲ್ಯದಿಂದ ಮಕ್ಕಳಿಗೆ ಪರಿಸರದ ಕಾಳಜಿ ಹಾಗೂ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದಾಗ ಸ್ವಚ್ಚ ಭಾರತ ಪರಿಕಲ್ಪನೆ ಸಾಧ್ಯ ಎಂದು ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಹೇಳಿದ್ದಾರೆ.ಪುರಸಭೆ ಕಚೇರಿಯಲ್ಲಿ ನಡೆದ ಶೇ.100ರಷ್ಟು ತಾಜ್ಯ ವರ್ಗೀಕರಣ ಪಾರಂಭ, ಸಂಪೂರ್ಣ ಪ್ಲಾಸ್ಟಿಕ್ ನಿಷೇಧ, ಸ್ವಚ್ಛ ವಿದ್ಯಾಲಯ ಸ್ಥಾಪನೆ ಹಾಗೂ ಸ್ವಚ್ಚತಾ ಆಂದೋಲನ ನಿರ್ವಹಿಸುವ ಬಗ್ಗೆ ಸ್ಥಳೀಯ ಶಾಲಾ ಮುಖ್ಯ ಶಿಕ್ಷಕ, ಸಂಘ ಸಂಸ್ಥೆಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಚ್ಛ ಕಾರ್ಕಳ ಕಲ್ಪನೆಯೊಂದಿಗೆ ಸ್ವಚ್ಚತಾ ಆಂದೋಲನ ಮತ್ತು ಸ್ವಚ್ಛ ಶಾಲೆ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಪುರಸಭೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಕಳೆದ ಹಲವು ವರ್ಷಗಳಿಂದ ಸ್ವಂತ ಖರ್ಚಿನಿಂದಲೇ ಸ್ವಚ್ಚತೆ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಹಾಗೂ ತಾವೇ ಕಸವನ್ನು ಹೆಕ್ಕಿ ತಮ್ಮ ವಠಾರ ಹಾಗೂ ರಾಮಸಮುದ್ರದ ಬಳಿವರೆಗೆ ಸ್ವಚ್ಛತೆ ಅರಿವು ಮೂಡಿಸುವ ಮೂಲಕ ಇತರಿಗೆ ಮಾದರಿಯಾಗಿದ್ದ ಮಂಗಳಪಾದೆ ನಿವಾಸಿ ಫೆಲಿಕ್ಸ್ ಅವರನ್ನು ಸನ್ಮಾನಿಸಿ, ಸ್ವಚ್ಛತೆ ರಾಯಭಾರಿಯನ್ನಾಗಿ ನೇಮಿಸಲಾಯಿತು.

ಈ ಸಂದರ್ಭ ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದರು.

Related posts

Leave a Reply

Your email address will not be published. Required fields are marked *