Header Ads
Breaking News

ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಡಾಟಾ ಸೆಂಟರ್ ಸಹಕಾರಿ: ಡಾ.ಬಿ. ಯಶೋವರ್ಮ

ಉಜಿರೆ: ಹಲವಾರು ಬಾರಿ ಕಡತಗಳಲ್ಲಿ ದಾಖಲಾದ ಮಾಹಿತಿಗಳಲ್ಲಿ ನಿಖರತೆ ಮತ್ತು ಸ್ಪಷ್ಟತೆ ಇರುವುದಿಲ್ಲ. ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲಿನ ಕಾರ್ಯಚಟುವಟಿಕೆಗಳ ಮಾಹಿತಿಗಳನ್ನು ಕಲೆಹಾಕಲು ಹಾಗೂ ಕ್ಲಪ್ತ ಸಮಯದಲ್ಲಿ ಅವುಗಳನ್ನು ಪಡೆಯಲು ಹೆಚ್ಚಿನ ಸಮಯವನ್ನು ವ್ಯಯ ಮಾಡಬೇಕಾಗುತ್ತದೆ. ಆದ್ದರಿಂದ ಈ ತೊಂದರೆಯನ್ನು ಕಡಿಮೆ ಮಾಡಲು ಡಾಟಾ ಸೆಂಟರ್ ಅನ್ನುವ ಕೇಂದ್ರವನ್ನು ಮೊದಲ ಬಾರಿಗೆ ನಮ್ಮ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ನುಡಿದರು. ಇವರು ಉಜಿರೆಯ ಶ್ರೀ ಧ.ಮಂ. ಪದವಿ ಕಾಲೇಜಿನಲ್ಲಿ ನೂತನ ಡಾಟಾ ಸೆಂಟರ್ ಉದ್ಘಾಟಿಸಿ ಮಾತನಾಡಿದರು. ಒಬ್ಬ ಕಿರಾಣಿ ವರ್ತಕನಿಗೆ ಅವನ ಅಂಗಡಿಯಲ್ಲಿರುವ ಎಲ್ಲಾ ವಸ್ತುಗಳ ಮಾಹಿತಿ ನಿಖರವಾಗಿ ಗೊತ್ತಿರುತ್ತದೆ. ಅದೇ ರೀತಿ ಕಾಲೇಜಿನ ಎಲ್ಲಾ ಕಾರ್ಯಕ್ರಮ ಹಾಗೂ ಅಂಕಿಅಂಶಗಳ ಮಾಹಿತಿಗಳು ಡಾಟಾ ಸೆಂಟರ್‌ನಲ್ಲಿ ಯಾವುದೇ ಸಮಯದಲ್ಲೂ ದೊರಕುವಂತಾಗುತ್ತದೆ. ಇದು ಕಾಲೇಜಿನ ಮೆದುಳಿನಂತೆ ಕಾರ್ಯನಿರ್ವಹಿಸಲಿz. ಇಂತಹ ಕೇಂದ್ರಗಳನ್ನು ಸ್ಥಾಪಿಸಲು ಇತರರಿಗೂ ಸ್ಫೂರ್ತಿಯಾಗಲಿ, ಕೇಂದ್ರದ ಚಟುವಟಿಕೆಗಳು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು. ದೀಪ ಪ್ರಜ್ವಲನೆ ಹಾಗೂ ಕಂಪ್ಯೂಟರ್‌ನಲ್ಲಿ ದತ್ತಾಂಶಗಳನ್ನು ದಾಖಲಿಸುವ ಮೂಲಕ ಸೆಂಟರ್‌ಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕೇಂದ್ರದ ಮೇಲ್ವಿಚಾರಕಿಯಾಗಿ ಶ್ವೇತಾ ಜವಾಬ್ದಾರಿಯನ್ನು ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಸಂಪತ್ ಕುಮಾರ್ ನಿರೂಪಿಸಿದರು.

Related posts

Leave a Reply

Your email address will not be published. Required fields are marked *