Header Ads
Header Ads
Breaking News

ಶಿಥಿಲಗೊಂಡ ಶಾಲಾ ಕಟ್ಟಡದ ಕುರಿತು ಎಚ್ಚರಿಕೆಯಿಂದಿರಿ

ತಾಲೂಕಿನ ವಿವಿಧ ವಿಭಾಗಗಳಲ್ಲಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳಿದ್ದರೆ, ಅದನ್ನು ದುರಸ್ಥಿಪಡಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಅದಕ್ಕೆ ಅಡ್ಡಿಯಾಗುವಂತಹಾ ಕಾರಣಗಳನ್ನು ಅಧಿಕಾರಿಗಳು ನೀಡಬಾರದು. ನಿರಂತರ ಮಳೆ ಸುರಿಯುತ್ತಿರುವುದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಕಟ್ಟಡಗಳ ದುರಸ್ಥಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಹೇಳಿದರು.ಕಾರ್ಕಳ ತಾ.ಪಂ. ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅವರು ಸದಸ್ಯರ ಪ್ರಶ್ನೆಗಳನ್ನಾಲಿಸಿ ಮಾತನಾಡಿದರು.ಮರ್ಣೆ ಗ್ರಾಮದ ಅಜೆಕಾರು ಪೇಟೆಯ ಸಮೀಪದ ಸ.ಹಿ.ಪ್ರಾ. ಶಾಲೆಯ ಬಗ್ಗೆ ಸ್ಥಳೀಯ ತಾ.ಪಂ. ಸದಸ್ಯ ಹರೀಶ್ ನಾಯಕ್ ವಿಷಯ ಪ್ರಸ್ತಾಪಿಸಿ, ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಎರಡು ವರ್ಷದಿಂದ ಈ ಬಗ್ಗೆ ಚರ್ಚೆ ನಡೆಯತ್ತಿದೆ. ಆದರೆ ಇನ್ನೂ ಸಂಬಂಧಿಸಿದವರು ಎಚ್ಚೆತ್ತುಕೊಂಡಿಲ್ಲ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್ ಪ್ರತಿಕ್ರಿಯಿಸಿ, ಆ ಶಾಲೆಯ ಹಳೆಯ ಕಟ್ಟಡಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ಜಿ.ಪಂ.ಗೆ ಕಳುಹಿಸಿ ಕೊಡಲಾಗಿದೆ ಎಂದರು. ಸಚ್ಚೇರಿಪೇಟೆ ಹಾಗೂ ಮುಂಡ್ಕೂರು ಭಾಗದಲ್ಲಿ 2018ರ ಜನವರಿ ತಿಂಗಳಿನಿಂದ ಎಪ್ರಿಲ್‌ವರೆಗೆ ೨ ಡೆಂಗ್ಯೂ ಪ್ರಕರಣಗಳು ಬಂದಿತ್ತು. ಮೇ. ತಿಂಗಳಲ್ಲಿ ೫ ಪ್ರಕರಣವಿತ್ತು. ಜೂ. ತಿಂಗಳಿನಲ್ಲಿ ತಾಲೂಕಿನಲ್ಲಿ 31 ಪ್ರಕರಣಗಳು ಕಂಡುಬಂದಿದ್ದು15 ಶಂಕಿತ ಹಾಗೂ15 ಖಚಿತಗೊಂಡಿದೆ ಎಂದರು.ಬೋಳ ಗ್ರಾಮದ ಇಟ್ಟಿಮೇರಿ ಸಮೀಪದಲ್ಲಿ ನಿರ್ಮಿಸಲಾಗಿರುವ ಕಿಂಡಿಅಣೆಕಟ್ಟು ತಗ್ಗುಪ್ರದೇಶದಲ್ಲಿದ್ದು, ಮಳೆನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಮೀಪದ ಸುಮಾರು10 ಎಕರೆ ಕೃಷಿ ಭೂಮಿಗೆ ಹಾನಿಯುಂಟಾಗಿದೆ. ಹೆಚ್ಚಿನ ನೀರು ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ತಾ.ಪಂ. ಸದಸ್ಯೆ ಒತ್ತಾಯಿಸಿದರು.ಈ ಸಂದರ್ಭ ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಪಸ್ಥಿತರಿದ್ದರು.

Related posts

Leave a Reply