Breaking News

ಶಿಥಿಲ ಎಡಮೊಗೆ ಸೇತುವೆ ದುರಸ್ತಿಗೆ ಆಗ್ರಹ, ಸ್ಥಳೀಯರಿಂದ ಪ್ರತಿಭಟನೆ

ಎಡಮೊಗೆ ಗ್ರಾಮದಲ್ಲಿ ಸೇತುವೆ ಕುಸಿತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಶೀಘ್ರ ಸೇತುವೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಸೇತುವೆ ಸಮೀಪದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಎಡಮೊಗೆಯಲ್ಲಿ ಸೇತುವೆ ಕಳೆದ ಆರು ತಿಂಗಳಿನಿಂದ ಕುಸಿಯುತ್ತಾ ಬಂದಿದ್ದು, ಈಗ ಘನವಾಹನಗಳು ಹೋಗಲಾರದ ಪರಿಸ್ಥಿತಿಗೆ ಬಂದು ತಲುಪಿದೆ. ಇಲ್ಲಿಯವರೆಗೆ ಸೇತುವೆ ದುರಸ್ಥಿಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಸೇತುವೆ ಬಳಿ ಪ್ರತಿಭಟನೆ ನಡೆಸಿದ್ರು. ಈ ಸಂಧರ್ಭ ಮಾತನಾಡಿದ ದೀಪಕ್ ಕುಮಾರ್ ಶೆಟ್ಟಿ, ಈ ಸೇತುವೆ ಬೀಳಲು ಆರಂಭಿಸಿ ವರ್ಷಗಳೇ ಕಳೆಯಲಾರಂಭಿಸಿದೆ, ಶಿಥಿಲಾವಸ್ಥೆಗೆ ತಲುಪಿದ್ದ ಸೇತುವೆ ಕಳೆದ ಆರು ತಿಂಗಳಿನಿಂದ ಕುಸಿಯಲಾರಂಭಿಸಿದೆ. ಅತೀ ಶೀಘದಲ್ಲಿ ರಸ್ತೆಯನ್ನು ದುರಸ್ತಿಗೊಳಿಸದೇ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇತುವೆಗಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಿಥಿಲಾವಸ್ಥೆಗೊಂಡಿರುವ ಎಡಮೊಗೆ ಸೇತುವೆ ಬಗ್ಗೆ ಮಾಧ್ಯಮಗಳು ವರದಿ ಪ್ರಸಾರ ಮಾಡಿದ ಸಂದರ್ಭ ಬೈಂದೂರು ಶಾಸಕ ಗೋಪಾಲ ಪೂಜಾರಿ ಮೇ. ೨೨ರನಂತರ ಸ್ಥಳ ಪರಿಶೀಲನೆ ನಡೆಸುತ್ತೇನೆ ಎಂದಿದ್ದರು. ಇತ್ತೀಚಿಗೆ ಶಾಸಕ ಗೋಪಾಲ ಪೂಜಾರಿ ಪತ್ರಿಕಾಗೋಷ್ಟಿ ನಡೆಸಿದ ವೇಳೆ ಈ ಸೇತುವೆ ಕುಸಿದಿರುವ ವಿಚಾರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದರು. ಈ ಸೇತುವೆ ದುರಸ್ತಿ ಕುರಿತು ಎಂಜಿನಿಯರ್‌ನ್ನು ಕಳುಹಿಸಿ ಪರೀಶೀಲನೆ ನಡೆಸಲಾಗುತ್ತದೆ ಎಂದು ಉತ್ತರಿಸಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ, ಅತೀ ಶೀಘ್ರ ಈ ಸೇತುವೆಯನ್ನು ದುರಸ್ತಿಗೊಳಿಸಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply