Header Ads
Header Ads
Header Ads
Breaking News

ಶಿರಾಡಿ ಅಡ್ಡಹೊಳೆಯಲ್ಲಿ 80 ಕೆ.ಜಿ ಗಾಂಜಾ ಪತ್ತೆ

ಕಾರೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್‌ನಲ್ಲಿ ನಡೆದಿದೆ.

ಸುಮಾರು ಆರು ಲಕ್ಷ ರೂ. ವೌಲ್ಯದ 80 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೋಂಡಾ ಸಿಟಿ ಕಾರಿನಲ್ಲಿ ಈ ಗಾಂಜಾ ಪತ್ತೆಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಶಿರಾಡಿ ಘಾಟ್ ರಸ್ತೆಯ ಅಡ್ಡಹೊಳೆ ಎಂಬಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರ ತಪಾಸಣೆಯ ವೇಳೆ ಆರೋಪಿಗಳು ಕಾರನ್ನು ತೊರೆದು ಕಾಡಿನಲ್ಲಿ ಪರಾರಿಯಾಗದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply