Header Ads
Header Ads
Breaking News

ಶಿರಾಡಿ ಘಾಟ್‌ನ ಸಾಧಕ-ಬಾಧಕದ ಕುರಿತು ವರದಿ. ಸಿಎಂ ಸಹಿತ, ಇಲಾಖಾ ಸಚಿವರಿಗೆ ವರದಿ ಸಲ್ಲಿಕೆ. ಪುತ್ತೂರು ಸಿವಿಲ್ ಇಂಜಿನಿಯರ್‍ಸ್ ಅಧ್ಯಕ್ಷ ಶಂಕರ ಭಟ್ ಹೇಳಿಕೆ

ಶಿರಾಡಿ ಘಾಟ್ ರಸ್ತೆಗೆ ಸಂಬಂಧ ಪಟ್ಟಂತೆ ಸ್ಥಳೀಯ ಜನರ ವಿನಂತಿ ಮೇರೆಗೆ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ ವತಿಯಿಂದ12 ಜನರ ಇಂಜಿನಿಯರ್‍ಸ್‌ಗಳ ತಂಡ ಹಾಗೂ ಶಾಸಕಿ ತೇಜಸ್ವಿನಿ ರಮೇಶ್ ಅವರು ಶಿರಾಟ್ ಘಾಟ್‌ನ ಸಾಧಕ-ಬಾಧಕಗಳು ಹಾಗೂ ಪರಿಹಾರದ ಕುರಿತು ವರದಿಯೊಂದನ್ನು ರಾಜ್ಯದ ಮುಖ್ಯಮಂತ್ರಿಗಳು ಸಹಿತ ಸಂಬಂಧ ಪಟ್ಟ ಇಲಾಖಾ ಸಚಿವರಿಗೆ, ಸ್ಥಳೀಯ ಶಾಸಕರು, ಸಹಾಯಕ ಆಯುಕ್ತರಿಗೆ ನೀಡಲಾಗಿದೆ ಎಂದು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್ ಅಧ್ಯಕ್ಷ ಶಂಕರ ಭಟ್ ಕೆ. ತಿಳಿಸಿದ್ದಾರೆ.ಅವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಈಗಿನ ಸ್ಥಿತಿಗತಿಯ ವೀಕ್ಷಣಾ ವರದಿ ಹಾಗೂ ಪರಿಹಾರ ಕುರಿತ ಪಟ್ಟಿಯನ್ನು ಮಾಧ್ಯಮದವರ ಮುಂದಿಟ್ಟರು. ವೀಕ್ಷಣಾ ವರದಿ ಪ್ರಕಾರ ಸುಮಾರು ಐದು ಅಂಶಗಳ ವರದಿ ಹಾಗೂ ಎಂಟು ಅಂಶಗಳ ಪರಿಹಾರವನ್ನು ಸೂಚಿಸಲಾಗಿದೆ. ಈಗಾಗಲೇ ಘಾಟ್‌ನ ನದಿಯ ಬದಿಗೆ ತಾಗಿಕೊಂಡಿರುವ ರಸ್ತೆಯಲ್ಲಿ ಸುಮಾರು12 ಭಾಗಗಳಲ್ಲಿ ಭೂ ಕುಸಿತ ಕಂಡು ಬಂದಿದ್ದು, ನದಿಯ ಅಂಚಿನಲ್ಲಿರುವ ರಸ್ತೆ ಭಾಗಗಳ ಕುಸಿತ ಎಷ್ಟು ಭೀಕರವಾಗಿದೆ ಎಂದರೆ ರಸ್ತೆಯ ಈ ಭಾಗಗಳಲ್ಲಿ ಘನ ಹಾಗೂ ಮಧ್ಯಮ ಸಾಮರ್ಥ್ಯದ ಸರಕು ಸಾಗಾಟ ವಾಹನಗಳು ಸಂಚರಿಸಿದರೆ ಅನಾಹುತಗಳಿಗೆ ಎಡೆಮಾಡಿದಂತಾಗುತ್ತದೆ, ಹೆಚ್ಚಿನ ಎಲ್ಲಾ ತಿರುವುಗಳಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಗುಡ್ಡಗಳು ಕೆಲವು ಕಡೆಗಳಲ್ಲಿ ಕುಸಿದಿದ್ದು, ಮುಂದೆಯೂ ಕುಸಿಯುವ ಭೀತಿಯಲ್ಲಿದೆ, ರಸ್ತೆ ಬದಿ ಬಸಿಕಾಲುವೆಗಳು ಸಮರ್ಪಕವಾಗಿಲ್ಲದ ಕಾರಣ ಮಳೆ ನೀರು ಹಾಗೂ ಒರತೆ ನೀರನ್ನು ಒಯ್ಯಲು ಬೇಕಾದಷ್ಟು ಪಾತ್ರವನ್ನು ಹೊಂದಿಲ್ಲ, ಪರಿಣಾಮ ಗುಡ್ಡೆಯ ನೀರು ರಸ್ತೆ ಮೇಲೆ ಹರಿದು ರಸ್ತೆಯ ಇನ್ನೊಂದು ಮಗ್ಗುಲಿಗೆ ಹರಿದಿರುವುದು ಕಂಡು ಬಂದಿದೆ, ಶಿರಾಡಿ ಘಾಟನ್ ಹೊಸ ಕಾಂಕ್ರಿಟ್ ರಸ್ತೆ ಹಾಗೂ ಹಿಂದಿನ ಕಾಂಕ್ರಿಟ್ ರಸ್ತೆಗಳಿಗೆ ಹಾನಿಯಾಗಿರುವುದು ಕಂಡು ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ ಎಂದರು.ಮಾಧ್ಯಮಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಆನಂದ ಕುಮಾರ್ ಎಸ್.ಕೆ., ಕಾರ್ಯದರ್ಶಿ ಅರ್ಜುನ್ ಎಸ್.ಕೆ., ಉಪಾಧ್ಯಕ್ಷ ಕಿಶೋರ್, ನಿರ್ದೇಶಕ ಕೆ.ಎಚ್.ಅಬ್ದುಲ್ಲ ಉಪಸ್ಥಿತರಿದ್ದರು.

Related posts

Leave a Reply