Header Ads
Header Ads
Breaking News

ಶಿರಾಲಿಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ:ತಡೆಯೊಡ್ಡಿದ ಸಾರ್ವಜನಿಕರು

ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು 45ಮಿಟರ್ ಬದಲಿಗೆ ಕೇವಲ 30ಮಿಟರ್ ಅಗಲೀಕರಣದ ಕಾಮಗಾರಿಗೆ ಮುಂದಾದ ಐಆರ್‌ಬಿ ಕಂಪನಿಯನ್ನು ಸ್ಥಳಿಯ ಪಂಚಾಯತ್ ಹಾಗು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು ಅವೈಜ್ಞಾನಿಕ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಕಾಮಗಾರಿಗಾಗಿ ತೋಡಿದ ಚರಂಡಿಯನ್ನು ಮುಚ್ಚಿಸಿದ ಘಟನೆ ಶಿರಾಲಿಯಲ್ಲಿ ನಡೆದಿದೆಭಟ್ಕಳ ತಾಲೂಕಿನ ಶಿರಾಲಿ ರಾಷ್ಟ್ರೀಯ ಹೆದ್ದಾರಿ ಅಗಲಿಕರಣ ಸಂಬಂದ ಹಲವಾರು ತಿಂಗಳಿಂದ ರಸ್ತೆಯನ್ನು 4 ಮೀಟರ್ ಬದಲಿಗೆ ಕೇವಲ 30ಮೀಟರ್ ಅಗಲಿಕರಣಕ್ಕೆ ಮುಂದಾದ ಬಗ್ಗೆ ಸ್ಥಳಿಯ ಪಂಚಾಯತ್ ಹಾಗು ಸಾರ್ವಜನಿಕರು ಪ್ರತಿಭಟನೆಯ ಹಾದಿಯನ್ನು ಹಿಡಿದಿದ್ದರು. 

45 ಮಿಟರ್ ಬದಲು30 ಮಿಟರ್ ಅಗಲಿಕರಣ ಮಾಡುವುದರಿಂದ ಶಿರಾಲಿಯ ಅಭಿವೃದ್ದಿ ಕುಂಠಿತವಾಗುವುದ ಜೋತೆಗೆ ರಸ್ತೆ ಅಪಘಾತಗಳು ಸಂಭವಿಸಿ ಸಾವು ನೋವುಗಳು ಸಂಭವಿಸುತ್ತದೆ ಈ ಹಿನ್ನೆಲೆಯಲ್ಲಿ ಸ್ಥಳಿ ಪಂಚಾಯತ್ ಮತ್ತು ಸಾರ್ವಜನಿಕರು ಹೋರಾಟದ ಹಾದಿಯನ್ನೆ ಹಿಡಿದಿದು ಜಿಲ್ಲಾಡಳಿತದ ಗಮನಕ್ಕೂ ತಂದಿದ್ದರು.ಸ್ಥಳಿಯಾಡಳಿತಕ್ಕೆ ಹಾಗು ಸ್ಥಳಿಯ ಸಾರ್ವಜನಿಕರ ಬೇಡಿಕೆ ಹಾಗು ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನು ಕೊಡದೆ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ೪೫ ಮೀಟರ್ ಬದಲು ಕೆವಲ 30ಮಿಟರ್ ಅಗಲಿಕರಣದ ಕಾಮಗಾರಿಗೆ ಮುಂದಾಗಿ ಸಾರ್ವಜನಿಕರ ಆಶೊತ್ತರಗಳಿಗೆ ಕೊಡಲಿ ಏಟನ್ನು ಹಾಕಲು ಮುಂದಾಗಿದೆ. ಇದರಿಂದ ರೊಚ್ಚಿಗೆದ್ದ ಸ್ಥಳಿಯಾಡಳಿತ ಹಾಗು ಸಾರ್ವಜನಿಕರು ಕಾಮಗಾರಿ ನಡೆಸಲು ಬಂದ ಐಆರ್‌ಬಿ ಕಂಪನಿಯನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿಗಾಗಿ ಚರಂಡಿ ಹೊಂಡವನ್ನು ಮುಚ್ಚಿಸಿದರು ಈ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದ್ದು ಹೀಗೆ ಜವಾಬ್ದಾರಿಯನ್ನು ಹೊಂದಿರತಕ್ಕ ಜಿಲ್ಲಾಡಳಿತ ಹಾಗು ತಾಲೂಕಾಡಳಿ ಗ್ರಾಮ ಪಂಚಾಯತ್‌ನಂತ ಸ್ಥಳಿಯಾಡಳಿತಕ್ಕೆ ಸ್ಪಂದಿಸದೆ ಆನೆ ನಡೆದಿದ್ದೆ ದಾರಿ ಎನ್ನುವಂತೆ ಸ್ತಳಿಯಾಡಳಿತಕ್ಕೆ ಯಾವ ಬೆಲೆಯನ್ನು ಕೊಡದೆ ತನ್ನಿಷ್ಟದಂತೆ ವರ್ತಿಸುತ್ತಿರುವುದು ಮಾತ್ರ ವಿಪರ್‍ಯಾಸವೆ ಸರಿ ಇನ್ನು ಮುಂದಾದರು ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಹಾಗು ಜನಪ್ರತಿನಿದಿಗಳು ಮಧ್ಯ ಪ್ರವೇಶಿಸಿ ಮುಂದಾಗುವ ಗಂಡಾಂತರಕ್ಕೆ ತಡೆಹಾಕುವರೆ ಎಂದು ಕಾದುನೋಡಬೇಕಾಗಿದೆ.

Related posts

Leave a Reply