Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಶಿರಾಲಿಯಲ್ಲಿ ನಿರ್ವಹಣೆ ಇಲ್ಲದ ಸರ್ಕಾರಿ ಕಾಲುವೆ 4 ವರ್ಷದಿಂದ ಹೋರಾಟ ನಡೆಸುತ್ತಿರುವ ರೈತರು

ಶಿರಾಲಿ ಗ್ರಾ.ಪಂ. ವ್ಯಾಪ್ತಿಯ ನೀರಕಂಠ ಸಾಲೇಮನೆ ವ್ಯಾಪ್ತಿಯಲ್ಲಿ ಎಕರೆಗಟ್ಟಲೇ ಜಮೀನಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಕಾಲುವೆ ನಿರ್ಮಿಸಲಾಗಿತ್ತು. ಆದರೆ ಅದೀಗ ನಿರ್ವಹಣೆ ಇಲ್ಲದೆ ರೈತರೇ ಕಾಲುವೆಯ ಹೂಳೆತ್ತುವ ಕಾರ್ಯ ಮಾಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತೀ ದೊಡ್ಡ ನೀರಾವರಿ ಕಾಲುವೆ ಇದಾಗಿದ್ದು, ಈ ಭಾಗದ ರೈತರು ಮಾತ್ರ ಕಾಲುವೆಯ ಪ್ರಯೋಜನ ಪಡೆಯದೇ ಇಲಾಖೆಯ ಬೇಜವಾಬ್ದಾರಿ ನಿರ್ವಹಣೆಯಿಂದ ವಂಚಿತರಾಗಿದ್ದಾರೆ. ಇಲ್ಲಿನ ಕಡವಿನಕಟ್ಟೆ ಡ್ಯಾಂನಿಂದ ಬರುವ ನೀರು ಸರಿ ಸುಮಾರು 700 ಎಕರೆ ಜಮೀನಿಗೆ ಸಾಗುವಳಿ ಮಾಡಲು ಈ ಕಾಲುವೆ ಅನೂಕೂಲವಾಗುತ್ತಿತ್ತು. ಆದರೆ ಮೂರ್‍ನಾಲ್ಕು ವರ್ಷಗಳಿಂದ ಇಲಾಖೆಯಿಂದ ನಿರ್ವಹಣೆ ಮಾಡದೇ ಹಾಗೇ ಇದ್ದುದರ ಪರಿಣಾಮ ಈ ಕಾಲುವೆಯಲ್ಲಿ 2 ರಿಂದ 4 ಅಡಿಯಷ್ಟು ಹೂಳು ತುಂಬಿಕೊಂಡಿದ್ದು ಇದರಿಂದ ರೈತರಿಗೆ ಹಾಗೂ ಇಲ್ಲಿನ ನಿವಾಸಿಗರಿಗೆ ಸಮಸ್ಯೆಯಾಗಿದೆ. ಕಾರಣ ಈ ಕಾಲುವೆಯಿಂದ ಬರುವ ನೀರಿನಿಂದ ಇಲ್ಲಿ ರೈತರು ತಮ್ಮ ಜಮೀನನ್ನು ಸಾಗುವಳಿ ಮಾಡಿಕೊಳ್ಳುತ್ತಿದ್ದರು. ಇಲಾಖೆಯ ಇಂಜಿನಿಯರಗಳಿಗೆ ಹಲವು ವರ್ಷದಿಂದ ಲಿಖಿತ ಮೌಖಿಕ ಹಾಗೂ ಶಿರಾಲಿ ಗ್ರಾ.ಪಂ.ನಿಂದ ಮನವಿಯನ್ನು ಸಲ್ಲಿಸಿದರು ಯಾವುದೇ ಪ್ರಯೋಜನಬಾರದ ಹಿನ್ನೆಲೆ ಇಲ್ಲಿನ ರೈತರೆಲ್ಲರು ಸೇರಿ ಕಾಲುವೆಯಲ್ಲಿನ ಹೂಳನ್ನು ಮೇಲೆತ್ತುವ ಕಾರ್ಯ ಮಾಡುತ್ತಿದ್ದಾರೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply