Header Ads
Header Ads
Breaking News

ಶಿರಾಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಹಂದಿಗಳ ಕಾಟ ಬೇಸತ್ತು ಹೊದ ಜನತೆ, ಕಣ್ಣಿದ್ದು ಕುರುಡಾದ ಗ್ರಾಮ ಪಂಚಾಯತ್

ಭಟ್ಕಳ ತಾಲೂಕಿನ ಶಿರಾಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಹಂದಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಹಂದಿಗಳ ಕಾಟಕ್ಕೆ ಬೆಸತ್ತ ಸಾರ್ವಜನಿಕರು ಗ್ರಾಮ ಪಂಚಾಯತ್ ಗಮನಕ್ಕೆ ತಂದರು ಕೂಡಾ ಪಂಚಾಯತ್ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಅಲೆಮಾರಿ ಜನಾಂಗದವರು ಊರು ಹಂದಿಗಳನ್ನು ಆಹಾರಕ್ಕಾಗಿ ಸಾಕಿದ್ದು ಇವರು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗುವಾಗ ತಮ್ಮೊಂದಿಗೆ ಈ ಊರ ಹಂದಿಗಳನ್ನು ಸಹ ಸಾಗಿಸುತ್ತಾರೆ ತಾವು ತಂದಂತಹ ಹಂದಿಗಳನ್ನು ಹಾಗು ಹಂದಿ ಮರಿಗಳನ್ನು ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಈ ಕಾರಣದಿಂದ ಶಿರಾಲಿಯ ಪ್ರದೇಶಗಳಲ್ಲಿ ಈ ಊರ ಹಂದಿಗಳ ಸಂಖ್ಯೆ ದಿನೆ ದಿನೆ ಉಲ್ಬಣವಾಗುತ್ತಿದ್ದು ಶಿರಾಲಿಯ ಜನತೆಯು ಈ ಹಂದಿಗಳ ಕಾಟದಿಂದ ಬೆಸತ್ತು ಹೊಗಿದ್ದಾರೆ. ಈ ಬಗ್ಗೆ ಇಲ್ಲಿನ ಸ್ಥಳಿಯರು ಗ್ರಾಮ ಪಂಚಾಯತನ ಗಮನಕ್ಕೆ ತಂದರು ಕೂಡ ಪಂಚಾಯತ್ ಎಂದಿನಂತೆ ತನ್ನ ಮೌನವನ್ನು ಮುಂದುವರಿಸಿದೆ. ಈ ಹಂದಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಊರಿನಲ್ಲಿರುವ ಬಾಳೆ ತೋಟ ತರಕಾರಿ ಕೈ ತೋಟ ಹಾಗು ಹೂವಿನ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ವರದಿ ರಾಘವೇಂದ ಮಲ್ಯ ಭಟ್ಕಳ